ಬೆಂಗಳೂರು: ರಾಜ್ಯದಲ್ಲಿ ಇಂದು 973 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 17 ಮಂದಿ ಸಾವನ್ನಪ್ಪಿದ್ದು, 1,071 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ಒಟ್ಟು 258 ಕೇಸ್ ದಾಖಲಾಗಿದೆ.ರಾಜ್ಯದಲ್ಲಿ ಒಟ್ಟು 17,386 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,56,137 ಮಂದಿಗೆ ಕೊರೊನಾ ಬಂದಿದೆ. 29,01,299 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.69ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.74ರಷ್ಟಿದೆ. ಇದನ್ನೂ ಓದಿ: ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವುಇಂದು ರಾಜ್ಯದಲ್ಲಿ ಒಟ್ಟು 4,41,743 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,39,090 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,20,816 + 18,274 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 243 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 8 ಜನ ಮರಣ ಹೊಂದಿದ್ದಾರೆ. 260 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಅರವಿಂದ್‍ಗೆ ಕ್ಯೂಟ್ ಎಂದ ದಿವ್ಯಾ ಉರುಡುಗಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಳ್ಳಾರಿ 6, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 243, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 30, ಚಿತ್ರದುರ್ಗ 10, ದಕ್ಷಿಣ ಕನ್ನಡ 258, ದಾವಣಗೆರೆ 7, ಧಾರವಾಡ 6, ಹಾಸನ 62, ಕಲಬುರಗಿ 8, ಕೊಡಗು 52, ಕೋಲಾರ 12, ಕೊಪ್ಪಳ 1, ಮಂಡ್ಯ 11, ಮೈಸೂರು 78, ರಾಮನಗರ 1, ಶಿವಮೊಗ್ಗ 37, ತುಮಕೂರು 31, ಉಡುಪಿ 53, ಉತ್ತರ ಕನ್ನಡ 31, ಮತ್ತುವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.






 Advertisement 




Sign in to your account
Username or Email Address


Password

 Remember Me


