ರಾಯಚೂರು:  ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.ಮಠದಲ್ಲಿನ ಯತಿಗಳ ಬೃಂದಾವನ ದರ್ಶನ ಮಾಡಿದರು. ನೂತನವಾಗಿ ಲೋಕಾರ್ಪಣೆಯಾಗಿರುವ ಹರಿದರ್ಶಿನಿ ಮ್ಯೂಸಿಯಂಗೆ ಭೇಟಿ ನೀಡಿ ಮಠದ ಆಡಳಿತ ಮಂಡಳಿಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮ್ಯೂಸಿಯಂನ ವಿಶೇಷತೆ ಬಗ್ಗೆ ಸುಧಾಮೂರ್ತಿಗೆ ತಿಳಿಸಿಕೊಟ್ಟರು. ಬಳಿಕ ಶ್ರೀಗಳು ಫಲಪುಷ್ಪ ಮಂತ್ರಾಕ್ಷತೆಯೊಂದಿಗೆ ಆಶಿರ್ವಚನ ನೀಡಿದರು. ಇದನ್ನೂ ಓದಿ: ಸಿಡಿಲು ಬಡಿದು ಜೋಡಿ ಎತ್ತುಗಳು ಸಾವುರಾಯರ ಮಠದ ಭಕ್ತರಾಗಿರುವ ನಾರಾಯಣ ಮೂರ್ತಿ ಸುಧಾಮೂರ್ತಿ ದಂಪತಿ ಮಠಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ನಡೆದ ರಾಯರ 350ನೇ ಆರಾಧನಾ ಮಹೋತ್ಸವ ನಿಮಿತ್ತ ರಾಯರ ಮಠಕ್ಕೆ ಒಂದು ಲಾರಿಯಷ್ಟು ದಿನಸಿ ಪದಾರ್ಥಗಳನ್ನು ಕಾಣಿಕೆಯಾಗಿ ನೀಡಿದ್ದರು.Sign in to your account
Username or Email Address


Password

 Remember Me


