ಬೆಂಗಳೂರು: ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಂಗಳೂರು ಇನ್ ಫ್ಯಾಂಟ್ರೀ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅದೇ ಸ್ಥಳದಲ್ಲಿ ಶಿಲಾನ್ಯಾಸದ ಫಲಕವನ್ನು ಸಚಿವರು ಅನಾವರಣ ಮಾಡಿದರು. ಬೆಂಗಳೂರು ಕೇಂದ್ರ ಲೋಕಸಭಾಕ್ಷೇತ್ರದ ಮಾನ್ಯ ಸಂಸತ್ ಸದಸ್ಯ ಪಿ.ಸಿ. ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇಲ್ಲಿ ನಿರ್ಮಾಣವಾಗಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡವು ನೆಲಮಹಡಿ ಮತ್ತು 18 ಮಹಡಿಗಳನ್ನು ಮತ್ತು ನೆಲಮಾಳಿಗೆಯಲ್ಲಿ ವಾಹನ ನಿಲುಗಡೆಯ ಸೌಲಭ್ಯ ಒಳಗೊಂಡಿರುತ್ತದೆ. ಕಟ್ಟಡವು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳುತ್ತದೆ ಮತ್ತು ಗೃಹ ಶ್ರೇಯಾಂಕ Iಗಿ ಅನುಗುಣವಾಗಿರುತ್ತದೆ. ಈ ಕಟ್ಟಡವು ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳನ್ನು ಒಳಗೊಂಡಿರುತ್ತದೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ ವಿನ್ಯಾಸಿತವಾಗಿದೆ. ಇದನ್ನೂ ಓದಿ: ನಿಗದಿತ ಅವಧಿಯ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುತ್ತೆ: ಸಿ.ಸಿ.ಪಾಟೀಲ್ ಎರಡು ಕೊಳಾಯಿ ವ್ಯವಸ್ಥೆಯೊಂದಿಗೆ ಮರುಬಳಕೆಯ ನೀರನ್ನು ಕೈತೋಟಕ್ಕೆ ಬಳಸಲಾಗುತ್ತದೆ. ಮ್ಯಾಗ್ನೆಟಿಕ್ ಫಿಲ್ಟರ್ ಸಹಿತವಾದ ಕೇಂದ್ರೀಕೃತ ವಾಯು ಸ್ವಚ್ಛತೆ ವ್ಯವಸ್ಥೆ, ಮತ್ತು ಯುವಿ- ಕಿರಣ ಕ್ರಿಮಿನಾಶಕವನ್ನು ಒಳಗೊಂಡಿದೆ. ಕಟ್ಟಡವನ್ನು ಸಿಪಿಡಬ್ಲ್ಯುಡಿಯ ಬೆಂಗಳೂರು ಯೋಜನಾ ವೃತ್ತ ನಿರ್ಮಿಸುತ್ತದೆ. ಈ ಸುಸಜ್ಜಿತ ಕಟ್ಟಡದಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆದ್ಯತೆಯ ಮೇಲೆ ನಿವಾರಿಸಲು ಪ್ರತ್ಯೇಕವಾದ ಸಾರ್ವಜನಿಕ ಸಂಪರ್ಕ ಕಚೇರಿ ಮತ್ತು ತೆರಿಗೆ ಪಾವತಿದಾರರಿಗೆ ಸರದಿಗಾಗಿ ಕಾದು ಕುಳಿತುಕೊಳ್ಳುವ ಆವರಣವೂ ಇರುತ್ತದೆ. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್ಇದು ಯಾವುದೇ ತೊಡಕು ರಹಿತ ತೆರಿಗೆದಾರರ ಸೇವೆಗಳನ್ನು ಒದಗಿಸಲು ಆದಾಯಕರ ಸೇವಾ ಕೇಂದ್ರವನ್ನು ಹೊಂದಿರುತ್ತದೆ. ಕೇಂದ್ರ ಸ್ಥಾನದಲ್ಲಿರುವ ಈ ಕಚೇರಿ ಕಟ್ಟಡವು ತೆರಿಗೆದಾರ ಸ್ನೇಹಿಯಾಗಿದೆ. ಕಟ್ಟಡದ ವಿನ್ಯಾಸ ಮತ್ತು ಜಾಗದ ಹಂಚಿಕೆಯು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲಕರವಾದ ಕಾರ್ಯ ವಾತಾವರಣವನ್ನು ಒದಗಿಸುತ್ತದೆ.Sign in to your account
Username or Email Address


Password

 Remember Me


