ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಇಂದು ಒಂದು ಸಾವಿರದ ಒಳಗಡೆ ಕೇಸ್ ಗಳು ದಾಖಲಾಗಿವೆ. ಇಂದು ಕೂಡ ರಾಜ್ಯದಲ್ಲಿ 1,117 ಕೋವಿಡ್ ಕೇಸ್ ದಾಖಲಾಗಿದ್ದು 08 ಜನ ಸಾವನ್ನಪ್ಪಿದ್ದಾರೆ. ಇನ್ನೂ ಪಾಸಿಟಿವಿಟಿ ರೇಟ್ ಶೇ.0.71ಕ್ಕೆ ಇಳಿಕೆಯಾಗಿದೆ. 100 ಜನರಿಗೆ ಟೆಸ್ಟ್ ಮಾಡಿದ್ರೆ ಒಬ್ಬರಿಗೆ ಪಾಸಿಟಿವ್ ಆಗ್ತಿದೆ.ಬೆಂಗಳೂರಿನಲ್ಲಿ ಕೂಡ ಇಂದು 358 ಕೇಸ್ ದಾಖಲಾಗಿದ್ದು, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕೇಸ್ 300 ರ ಆಸು-ಪಾಸಿನಲ್ಲಿ ಕೇಸ್ ದಾಖಲಾಗ್ತಿದೆ. ಇಂದು ಬೆಂಗಳೂರಿನಲ್ಲಿ ಕೊರೊನಾಗೆ 5 ಮಂದಿ ಸಾವನ್ನಪ್ಪಿದ್ದಾರೆ. ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಡೆತ್ ಕಂಟ್ರೋಲ್ ಗೆ ಬಂದಿದೆ. ಜೊತೆಗೆ ರಾಜ್ಯದಲ್ಲಿ ಇಂದು 1,354 ಜನ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ 530 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕಳ್ಳಇಂದು ರಾಜ್ಯದಲ್ಲಿ ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 17,501ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು ಕೋವಿಡ್ ಟೆಸ್ಟ್ ಕೂಡ ಒಂದು ಲಕ್ಷಕ್ಕೂ ಹೆಚ್ಚು ಟೆಸ್ಟ್ ಆಗಿದೆ. 1,56,902 ಕೋವಿಡ್ ಟೆಸ್ಟ್ ಆಗಿದ್ದು 1,117 ಪಾಸಿಟಿವ್ ಆಗಿರೋದು ಕೊರೊನಾ ಕಂಟ್ರೋಲ್ ನಲ್ಲಿ ಇರೋದು ಗೊತ್ತಾಗ್ತಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಮಳೆಯ ಅಬ್ಬರ – ಮತ್ತೆ ಪ್ರವಾಹ ಭೀತಿಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 2, ಬೆಳಗಾವಿ 20, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 358, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 36, ಚಿತ್ರದುರ್ಗ 4, ದಕ್ಷಿಣ ಕನ್ನಡ 183, ದಾವಣಗೆರೆ 10, ಧಾರವಾಡ 5, ಗದಗ 0, ಹಾಸನ 48, ಹಾವೇರಿ 0, ಕಲಬುರಗಿ 4, ಕೊಡಗು 62, ಕೋಲಾರ 30, ಕೊಪ್ಪಳ 5, ಮಂಡ್ಯ 25, ಮೈಸೂರು 59, ರಾಯಚೂರು 0, ರಾಮನಗರ 0, ಶಿವಮೊಗ್ಗ 48, ತುಮಕೂರು 28, ಉಡುಪಿ 130, ಉತ್ತರ ಕನ್ನಡ 47, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಸ್ಮಶಾನಕ್ಕೆ ದಾರಿ ಇಲ್ಲದೆ ಮೃತದೇಹವನ್ನ ಕೆಸರಲ್ಲೇ ಹೊತ್ತೊಯ್ದ ಗ್ರಾಮಸ್ಥರುಇಂದಿನ 05/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/5XLbFrZTSN @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/Kw977Gyix5— K'taka Health Dept (@DHFWKA) September 5, 2021Sign in to your account
Username or Email Address


Password

 Remember Me


