ಬಾಗಲಕೋಟೆ: ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ಬಾದಾಮಿ ತಾಲೂಕಿನ ಮಂಗಳೂರು ಗ್ರಾಮದ ಯುವಕರು ರಕ್ಷಿಸಿ ಜೀವ ಉಳಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಸೇತುವೆ ಬಳಿಯ ಮಲಪ್ರಭಾ ನದಿಗೆ ವೃದ್ಧೆ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದರು. ಈ ವೇಳೆ ಮಂಗಳೂರು ಗ್ರಾಮದ ರವಿ, ಪವನ್ ಸೇರಿದಂತೆ ಐದಾರು ಯುವಕರು ಸ್ನಾನ ಮಾಡಲು ನದಿಗೆ ತೆರಳಿದ್ದು, ವೃದ್ಧೆ ನದಿಗೆ ಹಾರಿದ್ದನ್ನು ಗಮನಿಸಿದ್ದಾರೆ. ತಕ್ಷಣ ವೃದ್ಧೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್ಹೊರ ತೆಗೆದ ನಂತರ ಯುವಕರು ವೃದ್ಧೆಯನ್ನು ವಿಚಾರಿಸಿದಾಗ ತನ್ನ ಗೋಳನ್ನು ತೋಡಿಕೊಂಡಿದ್ದಾರೆ. ನದಿಗೆ ಬಿದ್ದ ರಭಸಕ್ಕೆ ವೃದ್ಧೆಯ ತಲೆಗೆ ಪೆಟ್ಟು ಬಿದ್ದಿದ್ದು, ಅದಕ್ಕೆ ಯುವಕರು ವೃದ್ಧೆಯನ್ನು ಶಿವಯೋಗ ಮಂದಿರಕ್ಕೆ ಬಿಟ್ಟು ಬಂದಿದ್ದಾರೆ. ಯುವಕರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆವೃದ್ಧೆಯು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದವರಾಗಿದ್ದು, ಸೊಸೆಯಂದಿರ ಕಾಟ ತಾಳಲಾರದೇ ಮನೆ ಬಿಟ್ಟು ಬಂದಿದ್ದಾರೆ. ಜೀವನದಲ್ಲಿ ಬೇಸತ್ತ ಅವರು ಆತ್ಮಹತ್ಯೆಗೆ ಮುಂದಾಗಿದ್ದಾರೆ.Sign in to your account
Username or Email Address


Password

 Remember Me


