ಮಂಡ್ಯ: ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಜೆಡಿಎಸ್ ಕಾರ್ಯಕರ್ತ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿತ್ತು. ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಹೊಣಕೆರೆ ಗ್ರಾಮಕ್ಕೆ ತೆರಳಿ ಅವರ ಅಂತಿಮ ದರ್ಶನವನ್ನ ಪಡೆದುಕೊಂಡು ಭಾವುಕರಾದರು.ಮಂಡ್ಯದ ನಾಗಮಂಗಲದ ಹೊಣಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಕಾರ್ಯಕರ್ತ ಆನಂದ್‍ಕುಮಾರ್ ನಿನ್ನೆ ತಮ್ಮ ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ದ್ವಿಚಕ್ರ ವಾಹನದಲ್ಲಿ ಬರುವಾಗ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆನಂದ್‍ಕುಮಾರ್ ಸೇರಿದಂತೆ ಅವರ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಹೊಣಕೆರೆ ಗ್ರಾಮಕಗಕೆ ತೆರಳಿ ಮೃತ ಆನಂದ್ ಮತ್ತು ಅವರ ಮೊಮ್ಮಕ್ಕಳ ಅಂತಿಮ ದರ್ಶನ ಪಡೆದುಕೊಂಡರು. ಇದನ್ನೂ ಓದಿ: ದಸರಾ ತಯಾರಿ- ಸೆ.8ರಂದು ಮೈಸೂರಿನಲ್ಲಿ ಜನಪ್ರತಿನಿಧಿಗಳ ಸಭೆಬಳಿಕ ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆನಂದ್‍ಕುಮಾರ್ ಅವರನ್ನು ಕಳೆದುಕೊಂಡು ತುಂಬಾ ನೋವುಂಟಾಗಿದೆ. ಅಲ್ಲದೆ ಆ ಪುಟ್ಟ ಮಕ್ಕಳು ಸಾವನ್ನಪ್ಪಿರುವುದು ಕರುಳು ಹಿಂಡಿದಂತಿದೆ. ದೇವರು ಹುಟ್ಟಿಸಿ, ಇಷ್ಟು ಬೇಗ ಯಾಕೆ ಕರೆದುಕೊಳ್ಳುತ್ತಾನೆ ಎಂದು ನೋವಾಗುತ್ತದೆ ಎಂದು ಭಾವುಕರಾದರು.Sign in to your account
Username or Email Address


Password

 Remember Me


