ಕೋಲಾರ: ನಾನು ಕೊಚ್ಚೆ ನೀರನ್ನೇ ಕುಡಿದಿದ್ದೇನೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 2 ನೇ ಬಾರಿಗೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ಕುಮಾರಸ್ವಾಮಿಗೆ ನೇರ ಟಾಂಗ್ ನೀಡಿದರು. ಕೊಚ್ಚೆ ನೀರನ್ನ ನಾನು ಕುಡಿದಿದ್ದೇನೆ, ನಾನು ಸತ್ತಿದ್ದರೆ ಅದು ಕೊಚ್ಚೆ ನೀರು. ನಾವು ರೈತರು ನಮಗೆ ನೀರು ಮುಖ್ಯ ಯಾವ ನೀರು ಅನ್ನೋದಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿಆಗಸ್ಟ್ 18 ರಂದು ಕೋಲಾರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ವೇಳೆ ಶಾಸಕ ರಮೇಶ್ ಕುಮಾರ್ ವಿರುದ್ಧ ಹೆಚ್‍ಡಿಕೆ ಹರಿಹಾಯ್ದಿದಿದ್ದರು. ಕೆ.ಸಿ.ವ್ಯಾಲಿ ಕೊಚ್ಚೆ ನೀರು ಕೊಟ್ಟು ಮಹಾನ್ ಕಾರ್ಯ ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ರು. ಇದಕ್ಕೆ ಇಂದು ರಮೇಶ್ ಕುಮಾರ್ ಎದುರಿಗೆ ತಮ್ಮ ನಾಯಕನಿಗೆ ಟಾಂಗ್ ನೀಡಿದ ಕೋಲಾರ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಎಂದಿನಂತೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರನ್ನು ಕೊಂಡಾಡಿದ್ರು. ಇನ್ನೂ ಬಳಿಕ ಮಾತನಾಡಿದ ರಮೇಶ್ ಕುಮಾರ್ ಗಾಳಿಯಲ್ಲಿ ಬಂದು ಮಾತನಾಡಿ ಹೋಗುವವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರೆಲ್ಲಾ ಹಾಗೆ ಇರಲಿ ದೊಡ್ಡವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು.Sign in to your account
Username or Email Address


Password

 Remember Me


