ಶಿವಮೊಗ್ಗ: ರಾಜ್ಯದ ಒಬ್ಬ ಜವಾಬ್ದಾರಿಯುತ ಸಚಿವನಾಗಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಸೇರಿಸಿದ್ದನ್ನ ಒಪ್ಪುವುದಿಲ್ಲ. ಅದೇ ರೀತಿ ಗಣೇಶೋತ್ಸವವನ್ನು ನಿಲ್ಲಿಸಬೇಕು ಎಂಬುದನ್ನು ಒಪ್ಪುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಜನರ ಆರೋಗ್ಯ ಮತ್ತು ಗಣೇಶೋತ್ಸವ ಎರಡು ಕಡೆಗೂ ಗಮನ ನೀಡಬೇಕು. ನಾವು ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿಯೇ ಗಣೇಶ ಉತ್ಸವ ಯಶಸ್ವಿಯಾಗಿ ನಡೆಯಬೇಕು ಎಂಬುದು ನಮ್ಮ ಆಶಯ ಎಂದರು. ಇದನ್ನೂ ಓದಿ: ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳಈ ಬಾರಿ ಯಾವುದೇ ಕಾರಣಕ್ಕು ಗಣೇಶೋತ್ಸವ ನಿಲ್ಲುವುದಿಲ್ಲ. ಗಣಪತಿ ಉತ್ಸವ ನಡೆಸಿಯೇ, ನಡೆಸುತ್ತೇವೆ. ಆದರೆ ಕೋವಿಡ್ ಕಾರಣದಿಂದಾಗಿ ನೀತಿ ನಿಯಮಗಳಡಿಯಲ್ಲಿ ಗಣೇಶೋತ್ಸವ ನಡೆಸುತ್ತೇವೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಇದಕ್ಕೆ ನೀತಿ ನಿಯಮ ಜಾರಿಗೆ ತರಲಾಗುತ್ತದೆ. ಈ ಬಾರಿ ಗಣೇಶ ಉತ್ಸವ ನಡೆಸಲು ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗ ಪತ್ತೆSign in to your account
Username or Email Address


Password

 Remember Me


