ಮೈಸೂರು: ಲಾಕ್‍ಡೌನ್ ನಡುವೆಯೂ ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.ಒಂದು ತಿಂಗಳಿನಲ್ಲಿ 1,29,73,194 ರೂ. ಸಂಗ್ರಹವಾಗಿದೆ. 50 ಗ್ರಾಂ. ಚಿನ್ನ, 8 ಕೆಜಿ 200 ಗ್ರಾಂ. ಬೆಳ್ಳಿ, 12 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಿಕ್ಕಿವೆ. ನಂಜನಗೂಡಿನ ದೇವಸ್ಥಾನದ ಸಿಬ್ಬಂದಿ ಹಾಗೂ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಬ್ಬಂದಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಹಾಗೂ ಚಿನ್ನಾಭರಣ ಎಣಿಕೆ ಮಾಡಿದ್ದಾರೆ. ಇದನ್ನೂ ಓದಿ: ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!ಲಾಕ್‍ಡೌನ್ ತೆರವು ನಂತರ ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಹುಂಡಿಗಳಿಗೆ ಕಾಣಿಕೆ ಹೆಚ್ಚಾಗಿದೆ. ಆದರೂ ಕೊರೊನಾ ಹಾಗೂ ಲಾಕ್‍ಡೌನ್ ನಡುವೆಯೂ ಹೆಚ್ಚು ಹಣ ಸಂಗ್ರಹವಾಗಿದೆ.Sign in to your account
Username or Email Address


Password

 Remember Me


