ನವದೆಹಲಿ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಹೈಜಂಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಪ್ಯಾರಾಲಿಂಪಿಕ್ಸ್  ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ಪದಕವು ಅವರ ಕಠಿಣ ಪರಿಶ್ರಮ ಮತ್ತು ಸಾಟಿಯಿಲ್ಲದ ಸಮರ್ಪಣೆಯ ಫಲವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆProud of Praveen Kumar for winning the Silver medal at the #Paralympics. This medal is the result of his hard work and unparalleled dedication. Congratulations to him. Best wishes for his future endeavours. #Praise4Para— Narendra Modi (@narendramodi) September 3, 2021ಹೈಜಂಪ್ ಟಿ64 ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದ ಪ್ರವೀಣ್ ಕುಮಾರ್ ರಜಲ್ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದೇ ಮೊದಲ ಭಾರಿಗೆ ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವ 18 ವರ್ಷದ ಪ್ರವೀಣ್ ಕುಮಾರ್ 2.07 ಮೀಟರ್ ಎತ್ತರ ಜಿಗಿದು ದಾಖಲೆ ಬರೆದಿದ್ದಾರೆ.#SILVER for #IND !A new Asian Record for Praveen Kumar as he jumps 2.07m in Men’s High Jump T64! ???? #GBR‘s Jonathan Broom-Edwards wins #gold!????????’s medal tally is now up to 1⃣1⃣! #Tokyo2020 #Paralympics #ParaAthletics pic.twitter.com/uzyjEZ1Qe2— #Tokyo2020 for India (@Tokyo2020hi) September 3, 2021ಚಿನ್ನ ಗೆದ್ದ ಬ್ರಿಟನ್ ಕ್ರೀಡಾಪಟು ಜೋನಾಥನ್ ಬ್ರೂಮ್ ಎಡ್ವಡ್ರ್ಸ್ 2.10 ಮೀಟರ್ ಎತ್ತರ ಜಿಗಿದರು. ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದ ಪೊಲಾಂಡ್‍ನ ಮಸಿಜ್ ಲೆಪಿಯಾಟೊ 2.04 ಮೀಟರ್ ಜಿಗಿದು ಮೂರನೇ ಸ್ಥಾನ ಪಡೆದಿದ್ದಾರೆ.Sign in to your account
Username or Email Address


Password

 Remember Me


