ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಗೋವಾ/ ಶ್ರೀಲಂಕಾ ಕ್ಯಾಸಿನೋ ಜೂಜು ಅಡ್ಡೆ ಬಿಸಿನೆಸ್ ಪಾಯಿಂಟ್ ಆಗಿ ಸ್ಯಾಂಡಲ್‍ವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಬೆಂಗಳೂರಿನ ಅಕ್ರಮ ಕ್ಯಾಸಿನೋ ಅಡ್ಡೆ ಬಾರಿ ಕೋಲಾಹಾಲ ಸೃಷ್ಟಿಸುವ ಸಂಕೇತಗಳು ಕಾಣುತ್ತಿದೆ.ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಕ್ಯಾಸಿನೋ ಅಡ್ಡ ತಲೆಯೆತ್ತಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೀಸ್ ರಸ್ತೆ ಹೆಚ್ ಆರ್ ಬಿ ಆರ್ ಬಡಾವಣೆ ಹಾಗೂ ಕಮ್ಮನಹಳ್ಳಿ ಮುಖ್ಯ ರಸ್ತೆಗಳಲ್ಲಿ ಕ್ಯಾಸಿನೋ ಜೂಜು ಅಡ್ಡೆ ಈಗ ಆರಂಭವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ  ಕೋವಿಡ್ ಆರ್ಥಿಕ ದುಸ್ಥಿತಿಯಲ್ಲಿ ಬಡವರು ಜೂಜು ಆಟವಾಡಿ ಮತ್ತಷ್ಟು ಗಂಭೀರ ಸನ್ನಿವೇಶಕ್ಕೆ ಕಾರಣವಾಗಬಹುದು ಎಂದು ಖುದ್ದು ಶಾಸಕ ಜಾರ್ಜ್ ಪೊಲೀಸ್ ಮಹಾ ನಿರ್ದೇಶಕರು, ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅಕ್ರಮ ಕ್ಯಾಸಿನೋ ನಿಲ್ಲಿಸಲು ಪತ್ರ ಮೂಲಕ ಮಾಹಿತಿ ಕೊಡಲಾಗಿದೆ.ಅಕ್ರಮ ಜೂಜು ಅಡ್ಡೆಗಳಿಂದ ಕಾನೂನು ಅಪರಾಧಗಳು ಹೆಚ್ಚಾಗಿವೆ. ಹೀಗಾಗಿ ತುರ್ತಾಗೆ ಈ ಜೂಜು ಅಡ್ಡೆಗಳನ್ನು ನಿಲ್ಲಿಸಬೇಕೆಂದು ಜಾರ್ಜ್ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆSign in to your account
Username or Email Address


Password

 Remember Me


