ಬೆಂಗಳೂರು: ರಾಜ್ಯದಲ್ಲಿ 1,240 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕು ಹರಡುವಿಕೆ ಪ್ರಮಾಣ ಶೇ.0.74ರಷ್ಟಿದೆ. ಇಂದು ಮಹಾಮಾರಿಗೆ 22 ಜನ ಸಾವನ್ನಪ್ಪಿದ್ದಾರೆ. ಕೋವಿಡ್-19 ಸೋಂಕಿನ ಮರಣ ಪ್ರಮಾಣ ಶೇ.1.77ರಷ್ಟಿದೆ.ಸದ್ಯ ರಾಜ್ಯದಲ್ಲಿ 18,378 ಸಕ್ರಿಯ ಪ್ರಕರಣಗಳಿದ್ದು, ಇವತ್ತು 1,252 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 1,65,386 ಸ್ಯಾಂಪಲ್ ಗನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿ ಇದುವರೆಗೂ 29,51,8844 ಪ್ರಕರಣಗಳು ವರದಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 37,261ಕ್ಕೇರಿಕೆಯಾಗಿದೆ.ಇತ್ತ ರಾಜಧಾನಿ ಬೆಂಗಳೂರಿನಲ್ಲಿ 319 ಜನರ ದೇಹವನ್ನು ಕೋವಿಡ್ ಮಹಾಮಾರಿ ಹೊಕ್ಕಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ 7,609 ಸಕ್ರಿಯ ಪ್ರಕರಣಗಳಿದ್ದು, ಇವತ್ತು 264 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮಹಾಮಾರಿಯಿಂದ ಬೆಂಗಳೂರಿನ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 7, ಬೆಳಗಾವಿ 49, ಬೆಂಗಳೂರು ಗ್ರಾಮಾಂತರ 15, ಬೆಂಗಳೂರು ನಗರ 319, ಬೀದರ್ 0, ಚಾಮರಾಜನಗರ 13, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 26, ಚಿತ್ರದುರ್ಗ 11, ದಕ್ಷಿಣ ಕನ್ನಡ 264, ದಾವಣಗೆರೆ 6, ಧಾರವಾಡ 17, ಗದಗ 1, ಹಾಸನ 76, ಹಾವೇರಿ 0, ಕಲಬುರಗಿ 3, ಕೊಡಗು 52, ಕೋಲಾರ 32, ಕೊಪ್ಪಳ 5, ಮಂಡ್ಯ 29, ಮೈಸೂರು 88, ರಾಯಚೂರು 2, ರಾಮನಗರ 1, ಶಿವಮೊಗ್ಗ 32, ತುಮಕೂರು 35, ಉಡುಪಿ 111, ಉತ್ತರ ಕನ್ನಡ 42, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ವ್ಯಾಕ್ಸಿನ್ ನೀಡಲು ಬಂದ ಆರೋಗ್ಯ ಸಿಬ್ಬಂದಿಗೆ ಕುಡುಕನ ಕಿರಿಕ್Sign in to your account
Username or Email Address


Password

 Remember Me


