ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಹೆಸರು ನಾಳೆ ರಿವೀಲ್ ಆಗಲಿದೆ.ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾಈ ಕುರಿತಂತೆ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಎಂಗೇಜ್ ಮೆಂಟ್ ವೀಡಿಯೋ ಆಗಿದ್ದು, ಇದರ ಜೊತೆಗೆ ಜ್ಯೂನಿಯರ್ ಚಿರುವಿನ ಹಲವಾರು ಹೆಸರುಗಳನ್ನು ಬಹಿರಂಗ ಪಡಿಸಿ. ಕೊನೆಗೆ ಸೆಪ್ಟೆಂಬರ್ 3 ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ರಿವೀಲ್ ಮಾಡುವುದಾಗಿ ಮೇಘನಾ ತಿಳಿಸಿದ್ದಾರೆ.  A post shared by Meghana Raj Sarja (@megsraj)ನಟ ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ವಿಧಿವಶರಾಗಿದ್ದರು. ಬಳಿಕ 5 ತಿಂಗಳಿಗೆ ಅರ್ಥಾತ್ 22 ಅಕ್ಟೋಬರ್ ನಲ್ಲಿ ಮೇಘನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು






 Advertisement 




Sign in to your account
Username or Email Address


Password

 Remember Me


