ಹಾಸನ: ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡಿದ್ದೀನಿ, ನೀವು ಏನು ಮಾಡಿದ್ರಿ ಹೇಳಿ ಎಂದು ಸಚಿವ ಕೆ.ಗೋಪಾಲಯ್ಯ ಚನ್ನರಾಯಪಟ್ಟಣದಲ್ಲಿ ಕಾರ್ಯಕರ್ತರ ಮೇಲೆ ಅಸಮಾಧಾನ ಹೊರಹಾಕಿದರು.ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ವಾಗತಕ್ಕಾಗಿ ಕಾದು ಕುಳಿದಿದ್ದಾಗ ಸಚಿವರ ಸುತ್ತುವರಿದ ಕಾರ್ಯಕರ್ತರು, ನಮ್ಮ ಕೆಲಸ ಆಗುತ್ತಿಲ್ಲ. ಹೀಗಾದ್ರೆ ನಮ್ಮ ಪಕ್ಷಕ್ಕೆ ಜನ ಹೇಗೆ ವೋಟ್ ಹಾಕ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾರ್ಯಕರ್ತರ ಮಾತಿಗೆ ಸಿಟ್ಟಿಗೆದ್ದ ಸಚಿವ ಗೋಪಾಲಯ್ಯ, ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡಿದ್ದೀನಿ ನೀವು ಏನು ಮಾಡಿದ್ರಿ ಹೇಳಿ ಎಂದು ಕಾರ್ಯಕರ್ತರ ವಿರುದ್ಧ ಸಿಟ್ಟಾಗಿದ್ದಾರೆ.ಈ ವೇಳೆ ಕಾರ್ಯಕರ್ತರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗಬೇಕು. ನಮ್ಮ ಕಾರ್ಯಕರ್ತರ ಕೆಲಸ ಆಗಬೇಕು ಎಂದು ಸಚಿವರಿಗೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ನಾಳೆ ಮತ್ತೆ ಬರ್ತೀನಿ. ಅದೇನು ಮಾಡಬೇಕು ಹೇಳಿ ಎಂದು ಎಲ್ಲರನ್ನು ಸಮಾಧಾನಪಡಿಸಿದರು. ಇದನ್ನೂ ಓದಿ: 75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿSign in to your account
Username or Email Address


Password

 Remember Me


