ತುಮಕೂರು: ಹರಿಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಹಾಗೂ ತುಮಕೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಡಿಸಿಯವರಿಗೆ ಮನವಿ ಸಲ್ಲಿಸಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ನೀವು ರೈತರ ಜೊತೆ ಮಾತುಕತೆ ನಡೆಸಿ ರೈತರು ಉಗ್ರಗಾಮಿಗಳಲ್ಲ. ತೀವ್ರಗಾಮಿಗಳು ಅಲ್ಲ. ಯಾವುದೇ ಪಕ್ಷದ ಏಜಂಟರುಗಳಲ್ಲ. ನಮಗೆಲ್ಲ ಸ್ವಂತಿಕೆ ಇದೆ. ನಮ್ಮ ಚಳವಳಿಗಳಿಗೆ ಚಾರಿತ್ರ್ಯ ಇದೆ. ಹಾಗಾಗಿ ರೈತರ ಸಮಸ್ತೆ ಕುರಿತು ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಪಾಲಿಕೆಯಲ್ಲಿ ಸ್ವಂತ ಶಕ್ತಿಯಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ: ಹೆಚ್.ಡಿ.ಕುಮಾರಸ್ವಾಮಿಈಗಾಗಲೇ ಸುಪ್ರಿಂ ಕೋರ್ಟ್ ನಿರ್ದೇಶನ ಇದೆ. ಒಂದೂವರೆ ವರ್ಷ ಯಾವುದೇ ಕಾನೂನು ಅನುಷ್ಠಾನ ಮಾಡಬಾರದು ಎಂದು ಹೇಳಿದೆ. ಆದರೂ ಪದೇ ಪದೇ ಪರೋಕ್ಷವಾಗಿ ಕೃಷಿ ಕಾನೂನು ಜಾರಿ ಮಾಡಲು ಹೋಗುತ್ತಿದ್ದಾರೆ. ರೈತರ ಜೊತೆ ಸಂಯಮದಿಂದ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಪೊಲೀಸರನ್ನು ಬಳಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆಯಿಂದ ಪ್ರಾಣಿ ಸಂಗ್ರಹಾಲಯದಲ್ಲಿ ಆಹಾರದ ಕೊರತೆ ಇಲ್ಲ: ಪ್ರಭು ಚವ್ಹಾಣ್ಇದೇ ವೇಳೆ ತುಮಕೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು. ಇಂಥಹ ಕೃತ್ಯಗಳು ನಡೆಯಬಾರದು. ತಪ್ಪಿತಸ್ಥ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. Sign in to your account
Username or Email Address


Password

 Remember Me


