ಮಂಗಳೂರು: ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಕೇಳಿ ಬಂದಿದೆ. ಕಾಸರಗೋಡಿನ ಬದಿಯಡ್ಕ ನಿವಾಸಿ ಹಿಂದೂ ಯುವತಿ ನಾಪತ್ತೆಯಾಗಿದ್ದು, ಇದೀಗ ಅನ್ಯಕೋಮಿನ ಯುವಕನ ಜೊತೆ ಮದುವೆಯಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.ಕಾಸರಗೋಡಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದ ನೇಹಾ ಮೇ 23 ರಂದು ಮನೆಯಿಂದ ತೆರಳಿದ್ದು ಬಳಿಕ ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಅಲ್ಲದೇ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮಧು ಬಂಗಾರಪ್ಪ ಹೇರ್‌ಕಟ್ ಬಗ್ಗೆ ವಿಜಯೇಂದ್ರ ಮಾತು ಸರಿಯಲ್ಲ: ಪ್ರದೀಪ್ ಈಶ್ವರ್ಇದಾದ ಬಳಿಕ ಬದಿಯಡ್ಕದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವತಿ ನೇಹಾ ಹಾಗೂ ಯುವಕ ಮಿರ್ಶಾದ್ ಭಾವಚಿತ್ರ ಸಹಿತ ನೋಟೀಸ್ ಅಲ್ಲಿನ ಬೊರ್ಡ್ ನಲ್ಲಿ ಪತ್ತೆಯಾಗಿತ್ತು. ಇದೀಗ ಇಬ್ಬರೂ ಬದಿಯಡ್ಕ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪೊಲೀಸರು ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಯುವತಿ ಸ್ವ-ಇಚ್ಛೆಯಿಂದ ಯುವಕನ ಜೊತೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ.VHP ಕಿಡಿ: ಈಕೆಯನ್ನ ಲವ್ ಜಿಹಾದ್ ಗೆ ಬಲಿಯಾಗಿಸಲಾಗಿದೆ ಎಂದು ಮನೆಯವರು ಹಾಗೂ ವಿಎಚ್ ಪಿ ಆರೋಪಿಸಿದೆ. ಸ್ಥಳೀಯ ಮುಸ್ಲಿಂ ಲೀಗ್ ನಾಯಕ ಷಡ್ಯಂತ್ರ ರೂಪಿಸಿ ಪ್ರೇಮಾಂಕುರವಾಗುವಂತೆ ಮಾಡಿದ್ದಾನೆ, ಹಿಂದೂ ಯುವತಿಯನ್ನ ಮುಸ್ಲಿಂ ಧರ್ಮಕ್ಕೆ ಮತಾಂತರಿಸಲು ಭಾರೀ ಸಂಚು ನಡೆಸಿದ್ದಾರೆಂದು ವಿಎಚ್ ಪಿ ಮುಖಂಡರು ಆರೋಪಿಸಿದ್ದಾರೆ.Sign in to your account
Username or Email Address


Password

 Remember Me


