ಬೀದರ್: ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ 2 ಸ್ಟೂಡೆಂಟ್ಸ್ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.ನಗರದ ಜಿಎನ್ ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ವಿದ್ಯಾರ್ಥಿಗಳ ಗುಂಪಿನ ನಡುವೆ ನಡೆದ ಮಾರಾಮಾರಿಯ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಎಕ್ಸಕ್ಲೂಸಿವ್ ಸುದ್ದಿ ಬಿತ್ತರಿಸಿತ್ತು. ಇದನ್ನೂ ಓದಿ: ಹಗ್ಗಜಗ್ಗಾಟದಲ್ಲಿ ಚೀನಿಯರನ್ನು ಸೋಲಿಸಿದ ಭಾರತೀಯ ಸೈನಿಕರುಹಲ್ಲೆ ಮಾಡಿ ಪರಾರಿಯಾಗಿದ್ದ ಬಶೀರ್ ಖಾನ್, ಗಫರಾನ್, ಶೇಕ್ ಪಾಷಾ, ಬಿಲಾಲ್ ಸೇರಿದಂತೆ 17 ಕ್ಕೂ ಹೆಚ್ಚು ಅನ್ಯ ಗುಂಪಿನ ಸ್ಟೂಡೆಂಟ್ಸ್ ಮೇಲೆ ಎಫ್ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಇಂಜಿನಿಯರಿಂಗ್ ವಿದ್ಯಾರ್ಥಿ ನಟರಾಜ್ ನೀಡಿದ ದೂರಿನ ಮೇಲೆ ಈ ಎಫ್ಐಆರ್ ದಾಖಲಾಗಿದೆ.ಘಟನೆ ವಿವರ: ಕಾಲೇಜು ಫೆಸ್ಟ್‌ನಲ್ಲಿ ಜೈ ಶ್ರೀರಾಮ್ ಹಾಡು ಹಾಕಲಾಗಿತ್ತು. ಈ ವೇಳೆ ಉದ್ದೇಶ ಪೂರ್ವಕವಾಗಿ ಅನ್ಯ ಕೋಮಿನ ಸ್ಟೂಡೆಂಟ್ಸ್ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಕೈಯಲ್ಲಿದ್ದ ಖಡ್ಗ ಹಾಗೂ ಕೈಯಿಂದ ತಲೆ, ಮೂಗು, ಹಣೆ ಮೇಲೆ ಮನಬಂದಂತೆ ಥಳಿಸಿದ್ದಾರೆ ಎಂದು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ವಿದ್ಯಾರ್ಥಿ ನಟರಾಜ್ ಉಲ್ಲೇಖ ಮಾಡಿದ್ದಾರೆ.Sign in to your account
Username or Email Address


Password

 Remember Me


