ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ಜೊತೆಗೆ ಅಧಿಕಾರಿಗಳು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚಿಗೆ ವಿನೂತನ ಕಾರ್ಯಕ್ರಮಗಳ ಮೂಲಕ ಖೈದಿಗಳ ಮನ ಪರಿವರ್ತನೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅದೇ ರೀತಿ ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಷೇಷವಾದ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು, ವಿಶೇಷ ಪೂಜೆ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಹಿಮ್ಮುಖವಾಗಿ ಹರಿದ ಮಿಸಿಸಿಪ್ಪಿ ನದಿ- ವೀಡಿಯೋ ನೋಡಿಸಜಾ ಖೈದಿಗೆ ಶ್ರೀ ಕೃಷ್ಣನ ವೇಷ ಹಾಕುವ ಮೂಲಕ ನೂರಾರು ಮಂದಿ ಖೈದಿಗಳು ಇಂದು ಅಧಿಕಾರಿಗಳ ಜೊತೆಗೂಡಿ ಕೃಷ್ಣಾಷ್ಠಮಿ ಹಬ್ಬವನ್ನು ಆಚರಿಸಿದ್ದಾರೆ. ಕಾರ್ಯಕ್ರಮ ದಲ್ಲಿ ಜೈಲಿನ ಅಧಿಕಾರಿಗಳಾದ ರಂಗನಾಥ್ ಹಾಗೂ ಮತ್ತಿತರರು ಭಾಗವಹಿಸಿದ್ದರು. ಈ ಮೂಲಕ ಎಲ್ಲ ಖೈದಿಗಳು ಒಟ್ಟಿಗೆ ಸೇರುವ ಅವಕಾಶ ಕಲ್ಪಿಸಿದ್ದು, ಕೇವಲ ಜನ್ಮಾಷ್ಟಮಿ ಮಾತ್ರವಲ್ಲದೇ ಎಲ್ಲ ರೀತಿಯ ಹಬ್ಬಗಳು ವಿಷೇಶ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಖೈದಿಗಳ ಮನ ಪರಿವರ್ತನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಜೈಲಿನ ಅಧಿಕಾರಿಗಳ ಈ ಕಾರ್ಯಕ್ಕೆ ಉತ್ತಮ ಶ್ಲಾಘನೆ ವ್ಯಕ್ತವಾಗಿದೆ.Sign in to your account
Username or Email Address


Password

 Remember Me


