ಬೀದರ್: ಮಹಾಮಳೆಗೆ ರಸ್ತೆಯೇ ಕೊಚ್ಚಿ ಹೋದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜಮಖಂಡಿ ಗ್ರಾಮದ ಬಳಿ ನಡೆದಿದೆ. ಭಾಲ್ಕಿ-ಹುಲಸೂರ್, ಹುಲಸೂರ್ – ಮಹಾರಾಷ್ಟ್ರದ ಲಾತೂರ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿನ್ನೆಯಿಂದ ಸುರಿದ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಜನರು ತತ್ತರಿಸಿ ಹೋಗಿದ್ದಾರೆ.ಈ ಮಳೆಗೆ ಭಾಲ್ಕಿ ತಾಲೂಕಿನ ಗ್ರಾಮಗಳ ಹಲವು ರಸ್ತೆ, ಸೇತುವೆಗಳು ಕಡಿತಗೊಂಡಿದ್ದು ಉಚ್ಛಾ-ಬಸವಕಲ್ಯಾಣ, ಉಚ್ಛಾ-ಭಾಲ್ಕಿ ರಸ್ತೆ ಕಡಿತಗೊಂಡು ಸೇತುವೆ ಮೇಲೆ ನೀರು ಹರಿಯುತ್ತಿದೆ. ಜೊತೆಗೆ ಮಾವಿನಹಳ್ಳಿ-ಘೋಡವಾಡಿ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಈ ಮಹಾ ಮಳೆಗೆ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದ ಜನರು ಪರದಾಡುತ್ತಿದ್ದು, ಈ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ.ಇದನ್ನೂ ಓದಿ:ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸುವವರು ಅವಿವೇಕಿಗಳು: ಹುಲ್ಲೂರು ಕುಮಾರಸ್ವಾಮಿಸರ್ಕಾರಿ ಶಾಲೆಗೆ ಹಾಗೂ ಗ್ರಾಮದ ಹಲವು ಮನೆಗಳಿಗೂ ನೀರು ನುಗ್ಗಿದೆ. ಗ್ರಾಮದ ಪಕ್ಕದಲ್ಲಿರುವ ಹಳ್ಳಿ ತುಂಬಿ ಗ್ರಾಮಕ್ಕೆ ನೀರು ನುಗ್ಗಿದ್ದು, ಧಾರಕಾರ ಮಳೆಗೆ ಗ್ರಾಮದ ಹನುಮಾನ ದೇವಸ್ಥಾನದ ಗೋಪುರ ಕುಸಿತವಾಗಿದೆ.ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆಮಹಾ ಮಳೆಗೆ ಭಾಲ್ಕಿ ತಾಲೂಕಿನ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ತಾಲೂಕಿನಲ್ಲಿ ಮಹಾ ಮಳೆಯಾಗುತ್ತಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Sign in to your account
Username or Email Address


Password

 Remember Me


