ಮೈಸೂರು: ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಓರ್ವ ಆರೋಪಿ ಜೇಬಿನಲ್ಲೇ ಕಾಂಡೋಮ್ ಇಟ್ಟುಕೊಂಡು ತಿರುಗಾಡುತ್ತಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.ಹೌದು. ಬಂಧನಕ್ಕೆ ಒಳಗಾದ ಕಾಮುಕರ ಓರ್ವ ನಟೋರಿಯಸ್ ಕಾಮುಕನಿದ್ದಾನೆ. ಈತ ಯಾವಾಗಲೂ ಜೇಬಿನಲ್ಲಿ ಕಾಂಡೊಂಮ್ ಇಟ್ಟುಕೊಂಡೆ ತಿರುಗಾಡುತ್ತಿದ್ದ. ಇದನ್ನೂ ಓದಿ:ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್! 
ಗ್ಯಾಂಗ್‍ನ ಉಳಿದ ಸದಸ್ಯರು ಹಣಕ್ಕೆ ಬೇಡಿಕೆ ಇಟ್ಟರೆ ಈ ಕಾಮುಕನಿಗೆ ಸೆಕ್ಸ್ ಮುಖ್ಯವಾಗಿತ್ತು. ತಿಂಗಳಿಗೊಮ್ಮೆ ಮೈಸೂರಿಗೆ ಟ್ರಿಪ್ ರೀತಿ ಈ ಕಾಮುಕ ಬರುತ್ತಿದ್ದ. ಗ್ಯಾಂಗ್ ರೇಪ್ ಸ್ಥಳದಲ್ಲಿ ಸಿಕ್ಕಿದ್ದು ಈತನೇ ಬಳಸಿದ ಕಾಂಡೋಮ್ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.ಆರೋಪಿಗಳು ನಿರ್ಜನ ಪ್ರದೇಶವನ್ನೇ ಇವರು ಅಪರಾಧ ಕೇಂದ್ರವನ್ನಾಗಿ ಮಾಡುತ್ತಿದ್ದರು. ಈ ಹಿಂದೆಯೂ ಈ ಗ್ಯಾಂಗ್ ಹಲವು ಮಂದಿಗೆ ಬೆದರಿಸಿ ಹಣವನ್ನು ದೋಚಿದ್ದರು. ಆದರೆ ಅವರು ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗಾಗಿ ಮತ್ತಷ್ಟು ಧೈರ್ಯಗೊಂಡು ನೀಚ ಕೃತ್ಯಕ್ಕೆ ಇಳಿದಿದ್ದರು. ಇದನ್ನೂ ಓದಿ : ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರುSign in to your account
Username or Email Address


Password

 Remember Me


