ಹಾವೇರಿ: ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ತುಂಗಭದ್ರಾ ನದಿಯಲ್ಲಿ ಮುಳಗಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ.ನೀರು ಪಾಲಾದವರನ್ನು ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಫಕ್ಕಿರೇಶ್ ಹೊನ್ನಪ್ಪ ಮಣ್ಣೂರು(23), ಯಲ್ಲಪ್ಪ ಕುಂಬಾರ(34) ಎಂದು ಗುರುತಿಸಲಾಗಿದೆ. ಭಾನುವಾರವಾದ ಕಾರಣ ಮೀನು ಹಿಡಿಯಲು ಗುತ್ತಲ ಪಟ್ಟಣದಿಂದ ಚೌಡಯ್ಯದಾನಪುರ ಗ್ರಾಮಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ನದಿಗೆ ಇಳಿದಾಗ ಈಜು ಬಾರದೆ ಮುಳಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆಯಲ್ಲಿ ತಂಬಾಕು ಸೇವಿಸುತ್ತಿದ್ದ ವರನಿಗೆ ವಧುವಿನಿಂದ ಕಪಾಳಮೋಕ್ಷಮಾಹಿತಿ ತಿಳಿಯುತ್ತಿದ್ದಂತೆ ರಾಣೇಬೆನ್ನೂರು ಗ್ರಾಮಾಂತರ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವಕರ ಶೋಧಕಾರ್ಯ ನಡೆದಿದೆ.Sign in to your account
Username or Email Address


Password

 Remember Me


