ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರಿನ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಹಿನ್ನೆಲೆ ನಟೋರಿಯಸ್ ಆಗಿದ್ದು, ಅವರು ಜನರ ಮರ್ಯಾದೆಯನ್ನು ಬಂಡವಾಳ ಮಾಡಿಕೊಂಡಿದ್ದರು ಎಂಬ ಸತ್ಯ ವಿಚಾರಣೆ ವೇಳೆ ತಿಳಿದುಬಂದಿದೆ.ಈ ನಟೋರಿಯಸ್‍ಗಳು ಮೈಸೂರಿನ ಜನನಿಬಿಡ ಸ್ಥಳಗಳಲ್ಲಿ ಹಿಂದೆಯೂ ರಾಬರಿ, ಸರಗಳ್ಳತನ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ನಡೆಸಿದ್ದು, ಹಣ, ಚಿನ್ನಾಭರಣಗಳನ್ನು ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡುತ್ತಿರಲಿಲ್ಲ. ಆರೋಪಿಗಳು ಅದನ್ನೆ ಪ್ಲಸ್ ಪಾಯಿಂಟ್ ಮಾಡಿಕೊಂಡು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು ಎಂಬ ಸಂಗತಿ ವಿಚಾರಣೆಯ ವೇಳೆ ತಿಳಿದುಬಂದಿದೆ.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶಪೊಲೀಸರೇ ಶಾಕ್!
ಮೈಸೂರು ವಿದ್ಯಾರ್ಥಿನಿಯ ರೇಪ್ ಕೇಸ್‍ನಲ್ಲಿ ನಿನ್ನೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆರೋಪಿಗಳು ಹೇಳಿರುವ ಹೇಳಿಕೆಗಳನ್ನು ಕೇಳಿ ಪೊಲೀಸರೇ ಶಾಕ್ ಆಗುತ್ತಿದ್ದಾರೆ.ತಮಿಳುನಾಡಿನಿಂದ ಮೈಸೂರಿಗೆ ತರಕಾರಿ, ಬಾಳೆಕಾಯಿ ಗಾಡಿಗಳ ಜೊತೆ ಬರುತ್ತಿದ್ದ ಇವರು ಕೂಲಿ ಕೆಲಸಗಳನ್ನು ಮಾಡುತ್ತಿದ್ದರು. ಕೆಲಸ ಮುಗಿದ ನಂತರ ಮೈಸೂರಿನ ನಿರ್ಜನ ಪ್ರದೇಶಗಳು ಹಾಗೂ ಚಾಮುಂಡಿಬೆಟ್ಟದ ತಪ್ಪಲಿಗೆ ಸಂಜೆಯ ವೇಳೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂಟಿಯಾಗಿ ಬರುತ್ತಿದ್ದವರನ್ನು ಹೆದರಿಸಿ ಅವರ ಬಳಿ ಇರುತ್ತಿದ್ದ ಚಿನ್ನ, ಹಣ, ಮೊಬೈಲ್‍ಗಳನ್ನು ಕಸಿದುಕೊಂಡು ಕಳುಹಿಸುತ್ತಿದ್ದರು.ಇದನ್ನೂ ಓದಿ:ಮೈಸೂರು ಗ್ಯಾಂಗ್‍ರೇಪ್ – ಆರೋಪಿ ಮೇಲಿದೆ 10 ಕೇಸ್‍ಗಳುಇಂತಹ ಪ್ರಕರಣದಲ್ಲಿ ಹಣ, ಚಿನ್ನಾಭರಣ, ಮೊಬೈಲ್‍ಗಳನ್ನು ಕಳೆದುಕೊಂಡವರು ಮರ್ಯಾದೆಗೆ ಅಂಜಿ ಮತ್ತು ದೂರು ಕೊಟ್ಟರೆ ನಾವೇ ಅಲೆದಾಡಬೇಕಾಗುತ್ತೆ ಎಂದು ಆ ಕೆಲಸಕ್ಕೆ ಮುಂದಾಗಿಲ್ಲ. ಇದನ್ನೇ ಆರೋಪಿಗಳು ಬಂಡವಾಳ ಮಾಡಿಕೊಂಡಿದ್ದರು.ಈ ಆರೋಪಿಗಳು ಪದೇ ಪದೇ ಇಂತಹ ಪ್ರಕರಣಗಳನ್ನು ಮಾಡುತ್ತಿದ್ದು, ಗ್ಯಾಂಗ್ ರೇಪ್ ನಡೆದಿರುವ ಸ್ಥಳದಲ್ಲೇ ಈ ಹಿಂದೆ ದರೋಡೆ, ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಇದನ್ನೂ ಓದಿ:ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!






 Advertisement 




Sign in to your account
Username or Email Address


Password

 Remember Me


