ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಪೊಲೀಸ್ ಠಾಣೆಯ ಎಎಸ್‍ಐ ಗೋಪಿ ಗರಂ ಆಗಿದ್ದಾರೆ.ಗೋಪಿ ಅವರು ಮಾತನಾಡಿರುವ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಾಜಿ ಸಭಾಧ್ಯಕ್ಷರಿಗೆ ನಾವು ಮೊದಲಿಂದಲು ನಾವು ಗೌರವ ಕೊಡುತ್ತಿದ್ದೇವು. ಇವರು ಎಲ್ಲ ರಾಜಕಾರಣಿಗಳಿಗಿಂತ ವಿಭಿನ್ನವಾಗಿದ್ದರು. ಆದರೆ ಇವರು ನಡೆದುಕೊಂಡ ರೀತಿ ಅವರ ಗೌರವಕ್ಕೆ ದಕ್ಕೆ ಬರುವಂತದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇವರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಏನದ್ರೂ ಅವಘಡವಾಗಿದ್ದರೆ, ಇವರು ಏನು ಹೇಳುತ್ತಿದ್ದರು? ಹೆದ್ದಾರಿಗಳಲ್ಲಿ ಸರಿಯಾದ ವಾಹನ ತಪಾಸಣೆ ಆಗಿತ್ತಿಲ್ಲ ಎನ್ನುತ್ತಿದ್ದರು. ಸರಿಯಾದ ತಪಾಸಣೆ ಮಾಡುತ್ತಿದ್ದರೆ ಇವರು ನಮ್ಮ ಕುಟುಂಬದ ಕುರಿತಾಗಿ ಮಾತನಾಡುತ್ತಾರೆ. ನಾವು ಇವರ ಕುಟುಂಬದ ಕುರಿತಾಗಿ ಮಾತನಾಡುತ್ತೀವಾ? ನನ್ನ ಕೆಲಸದ ಕುರಿತಾಗಿ ಮಾತನಾಡಲಿ. ಈ ಪ್ರಕರಣದಿಂದ ಅವರ ಮೇಲೆ ಇಟ್ಟಿರುವ ಗೌರವವನ್ನು ಕಳೆದುಕೊಳ್ಳುವಂತಾಗಿದೆ. ತಪಾಸಣೆ ಮಾಡುತ್ತಿರುವಾಗ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲ್ಲ, ಹೆಂಡತಿ ಮಕ್ಕಳಿಗೆ ಒಳ್ಳೆಯದು ಆಗಲ್ಲ ಎಂದು ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ಇದನ್ನೂ ಓದಿ:  ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳುಈ ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು ನಾನು ಬರುತ್ತಿದ್ದೆ. ಆಗ ಟೋಲ್ ಬಳಿ ಪೊಲೀಸರು ನಡೆಯಿಂದ ನನಗೆ ಬೇಸವಾಯಿತ್ತು. ಅದಕ್ಕೆ ಮಾತನಾಡಿದೆ. ನಿಮಗೇನು ಮಕ್ಕಳು ಮರಿ ಇಲ್ಲವಾ ಹೋಗಿ ಎಂಬುದಾಗಿ ಹೇಳಿದೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಹಿನ್ನಲೆ ಏನು?
ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಆಕ್ರೋಶಗೊಂಡಿದ್ದರು. ಶುಕ್ರವಾರ ನಗರ ಠಾಣಾ ಎಸ್‍ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‍ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಈ ವೇಳೆ ಶ್ರೀನಿವಾಸ್‍ಪುರದಿಂದ ಬೆಂಗಳೂರಿನ ಕಡೆ ಬರುತ್ತಿದ್ದ ರಮೇಶ್ ಕುಮಾರ್ ತಮ್ಮ ವಾಹನ ನಿಲ್ಲಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಮೊನ್ನೆಯಲ್ಲಾ ಗೃಹ ಮಂತ್ರಿಗಳು ಆದೇಶ ಮಾಡಿದ್ದಾರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ಹಾಕಬೇಡಿ ಎಂದು ನೀವೇಕೆ ಹಾಕುತ್ತೀರ ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೋದು. ಏನು ಡಾಕ್ಯುಮೆಂಟ್ಟ್ ಚೆಕ್ ಮಾಡ್ತೀರ ನೀವು? ನಾಚಿಕೆಯಾಗಬೇಕು ನಿಮಗೆ. ಮಿನಿಸ್ಟರ್ ಮೊನ್ನೆತಾನೆ ಬಾಯಿಬಡ್ಕೊಂಡು ಹೇಳ್ತಾನೆ ನೀವು ಏನು ಮಾಡುವುದು ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗುತ್ತೆ? ಏನ್ ಡಾಕ್ಯುಮೆಂಟ್ಸ್ ಪರಿಶಿಲನೆ ಮಾಡುತ್ತಿದ್ದೀರಿ? ಇದೇ ಉದ್ಯೋಗನಾ ನಿಮಗೆ ಎಂದು ಪ್ರಶ್ನಿಸಿ ಪೊಲೀಸರ ವಿರುದ್ಧ ಗರಂ ಆಗಿದ್ದರು.Sign in to your account
Username or Email Address


Password

 Remember Me


