ಚಿಕ್ಕೋಡಿ: ಒಂದು ಕಡೆ ಪ್ರವಾಹದಿಂದ ನದಿ ತೀರದ ರೈತರು ಕಂಗೆಟ್ಟಿದ್ದರೆ, ಇತ್ತ ಉತ್ತಮ ಮಳೆಯಾದರೂ ಬಯಲು ಸೀಮೆ ರೈತರು ಸೋಯಾಬೀನ್ ಬೆಳೆದು ಕಂಗಾಲಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವ್ಯಾಪ್ತಿಯ ಹುಕ್ಕೇರಿ ರಾಯಬಾಗದ ಅಥಣಿ ತಾಲೂಕುಗಳಲ್ಲಿ ರೈತರು ಸೋಯಾಬೀನ್ ಬೆಳೆದಿದ್ದರು. ಆದರೆ ಸೋಯಾಬೀನ್‍ಗೆ ಈ ವರ್ಷ ಬೆಂಕಿ ರೋಗ ಬಿದ್ದಿರುವ ಕಾರಣ ಸುಟ್ಟು ಹಳದಿ ಬಣ್ಣಕ್ಕೆ ತಿರುಗಿದೆ. ಹೀಗಾಗಿ ಕಷ್ಟ ಪಟ್ಟು ರೈತ ಬೆಳೆದ ಬೆಳೆ ನಾಶವಾಗುವ ಸ್ಥಿತಿ ತಲುಪಿದೆ.ಈ ಬಾರಿ ನದಿ ತೀರದಲ್ಲಿ ಪ್ರವಾಹ ಉಂಟಾಗಿ ಬೆಳೆ ನಾಶವಾಗಿದ್ದರೂ ಬಯಲು ಸೀಮೆ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಉತ್ತಮ ಫಸಲು ಬರುವ ನೀರಿಕ್ಷೆಯಲ್ಲಿ ರೈತರು ಇದ್ದರು. ಆದರೆ ಈ ಬಾರಿ ಬಿದ್ದಿರುವ ಬೆಂಕಿ ರೋಗದಿಂದ ರೈತರು ದಿಕ್ಕುದೋಚದಂತೆ ಆಗಿದ್ದಾರೆ. ಸಾಲ ಸೂಲ ಮಾಡಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಬೆಂಕಿ ರೋಗ ಬಿದ್ದಿರುವ ಜಮೀನುಗಳನ್ನು ಸರ್ವೇ ಮಾಡಿಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಯಾವುದೇ ರಾಜ್ಯಕ್ಕೆ ಹೋದರೂ ಒಂದೇ ವಾಹನ ನಂಬರ್ – ಈಗಿನ ವ್ಯವಸ್ಥೆ ಹೇಗಿದೆ? ಯಾರಿಗೆ ಸಿಗಲಿದೆ?ಸದಾ ಒಂದಲ್ಲಾ ಒಂದು ಸಂಕಷ್ಟದಲ್ಲಿರುವ ಅನ್ನದಾತನಿಗೆ ಈ ಬಾರಿ ಬೆಂಕಿ ರೋಗ ಮಹಾ ಸಂಕಷ್ಟ ತಂದೊಡ್ಡಿದೆ. ಬೆಂಕಿ ರೋಗವನ್ನು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಿ ರೈತರಿಗೆ ರೋಗದ ಕುರಿತು ತಿಳುವಳಿಕೆ ನೀಡಬೇಕಿದೆ. ಅಷ್ಟೇ ಅಲ್ಲದೇ ಬೆಂಕಿ ರೋಗದಿಂದ ನಷ್ಟ ಅನುಭವಿಸುತ್ತಿರುವ ಸಹಾಯಕ್ಕೆ ಸರ್ಕಾರ ನಿಲ್ಲಬೇಕಿದೆ. ಇದನ್ನೂ ಓದಿ:ಅಪ್ರಾಪ್ತೆಗೆ ಕಿಸ್ ಮಾಡಿ ಪರಾರಿ – ಎಫ್‍ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ






 Advertisement 




Sign in to your account
Username or Email Address


Password

 Remember Me


