ಧಾರವಾಡ: ಮಹಿಳೆಯರಿಗೆ ಗನ್ ಕೊಡಬೇಕು ಎನ್ನುವುದಾದರೆ ಗೃಹ ಇಲಾಖೆ ಕೆಲಸ ಮಾಡುತ್ತಿಲ್ಲ, ಪೊಲೀಸರು ವಿಫಲವಾಗಿದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಸಾಪಾಂಡೆ ಗುಡುಗಿದರು.ಧಾರವಾಡದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಗನ್ ಕೊಡಬೇಕು ಎಂದು ಸಚಿವ ಆನಂದ ಸಿಂಗ್ ಹೇಳುವ ಮೂಲಕ ಬಿಜೆಪಿಯವರು ಗನ್ ಕೊಡಿ ಎಂದು ಹೊಸ ಸಂಸ್ಕೃತಿ ಆರಂಭ ಮಾಡಿದ್ದಾರೆ. ಅದರ ಪರಿಣಾಮ, ದುಷ್ಪರಿಣಾಮ ವಿಚಾರ ಮಾಡದೆ ಹೀಳಿಕೆ ನೀಡಬಾರದು. ಗನ್ ಕೊಡಬೇಕು ಎನ್ನುವದಾದರೆ ಗೃಹ ಇಲಾಖೆ ಕೆಲಸ ಮಾಡುತ್ತಿಲ್ಲ ಎಂದರ್ಥ, ಪೊಲೀಸರು ವಿಫಲವಾಗಿದ್ದಾರೆ ಎನ್ನುವುದನ್ನು ಆನಂದಸಿಂಗ್ ಒಪ್ಪಿಕೊಂಡಂತಾಯ್ತು ಎಂದು ಹೇಳಿದರು. ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರು ಹೇಳಿದ್ದು? ರಾಜ್ಯದಲ್ಲಿ ಸರ್ಕಾರ ಇಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಮಂತ್ರಿ ಮಂಡಲ ಇದ್ದರೆ ಮಾತ್ರ ಸರ್ಕಾರ ಅಲ್ಲ, ಜನರ ಪರ ಹಾಗೂ ಅಭಿವೃದ್ಧಿ ಪರವಾಗಿ, ಸಾಮಾಜಿಕ ನ್ಯಾಯಕ್ಕಾಗಿ ಸ್ಪಂದನೆ ಇರಬೇಕು. ಮೈಸೂರು ಘಟನೆ ನೋಡಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿವೆ. ಯಾರೂ ಕೇಳುವವರು, ಮಾತಾನಾಡುವವರಿಲ್ಲ ಎಂದರು.Sign in to your account
Username or Email Address


Password

 Remember Me


