ಮೈಸೂರು: ದರೋಡೆ ಮಾಡಲು ಹೋಗಿ ಯುವಕ ಹಾಗೂ ಯುವತಿ ಬಳಿ ಏನೂ ಸಿಗದಿದ್ದಾಗ ಯುವತಿಯನ್ನು ಅತ್ಯಾಚಾರ ಮಾಡಿ ಬೆದರಿಕೆ ಹಾಕಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿದ ಸತ್ಯಮಂಗಲದಲ್ಲಿ ಇಂದು ಬೆಳಗ್ಗೆ ಆರೋಪಿಗಳನ್ನು ಬಂಧಿಸಿ, ಇದೀಗ ಮೈಸೂರಿಗೆ ಕರೆತರಲಾಗಿದೆ.ಆರೋಪಿಗಳಲ್ಲಿ ಮೂವರು ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದವರಾಗಿದ್ದಾರೆ. ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಇವರ ಮೇಲಿದೆ. ಅಂತೆಯೇ ಯುವಕ ಹಾಗೂ ಯುವತಿಯನ್ನೂ ದರೋಡೆ ಮಾಡಲು ತಂಡ ಹೋಗಿತ್ತು. ಇವರ ಬಳಿ ಏನೂ ಸಿಗದಕ್ಕೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‍ರೇಪ್- ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆಸದ್ಯ ಐವರು ಆರೋಪಿಗಳನ್ನ ಮೈಸೂರಿಗೆ ಕರೆತಂದಿರುವ ಪೊಲೀಸರು, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಲಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದವರಾಗಿದ್ದು, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನಪ್ರಕರಣ ನಡೆದ ಸಂದರ್ಭದಲ್ಲಿ ಈ ಸ್ಥಳಕ್ಕೆ ಅಪರಿಚಿತರು ಬರಲು ಸಾಧ್ಯವಿಲ್ಲ ಯಾರು ಪರಿಚಿತರು ಮಾತ್ರ ಬರಲು ಸಾಧ್ಯ ಎಂಬ ಮಾಹಿತಿ ಮೇರೆಗೆ ತನಿಖೆಗೆ ಪೊಲೀಸರು ಮುಂದಾಗಿದ್ದರು. ಇತ್ತ ಯುವಕ ಹಾಗೂ ಯುವತಿ ಮೂರು ದಿನ ಅದೇ ಸ್ಥಳದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ಗಮನಿಸಿ, ನಾಲ್ಕನೇ ದಿನ ಕಾಮುಕರು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.Sign in to your account
Username or Email Address


Password

 Remember Me


