ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಇಸ್ಕಾನ್ ದೇವಾಸ್ಥಾನಕ್ಕೆ ಸಾರ್ವಜನಕರಿಗೆ ಪ್ರವೇಶ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.ಪ್ರಕಟಣೆಯಲ್ಲಿ ಏನಿದೆ?ಇಸ್ಕಾನ್ ದೇವಾಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಬಹಳ ಜನ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ಇಸ್ಕಾನ್ ಬೆಂಗಳೂರು ದೇವಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 29 ಮತ್ತು 30, 2021 ರಂದು ಆಚರಿಸುತ್ತಿದೆ. ಸಾರ್ವಜನಿಕರ ಸುರಕ್ಷತೆಯನ್ನು ಮತ್ತು ಸರ್ಕಾರಿ ನಿಯಮಗಳನ್ನು ಪರಿಗಣಿಸಿ ಮತ್ತು ಜವಾಬ್ದಾರಿಯುತ ಸಂಸ್ಥೆಯಾಗಿ, ಇಸ್ಕಾನ್ ಆಡಳಿತ ಮಂದಿರವನ್ನು ಈ ಎರಡೂ ದಿನ ಸಾರ್ವಜನಿಕರಿಗಾಗಿ ಮುಚ್ಚಿರುತ್ತದೆ ಎಂದು ನಿರ್ಧರಿಸಿದೆ. ಇದನ್ನೂ ಓದಿ: ಡೆಹ್ರಾಡೂನ್-ಹೃಷಿಕೇಶ್ ಹೆದ್ದಾರಿಯಲ್ಲಿ ಮುರಿದು ಬಿದ್ದ ಸೇತುವೆ- ಜನಜೀವನ ಅಸ್ತವ್ಯಸ್ತಈ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಲಾಗಿದೆ. ಹಬ್ಬದ ವೇಳಾಪಟ್ಟಿಯ ಪ್ರಕಾರ ಎಲ್ಲ ಸೇವೆಗಳನ್ನೂ ದೇವರಿಗೆ ಅರ್ಪಿಸಲಾಗುವುದು. ಭಕ್ತರು ಆನ್ ಲೈನ್‍ನಲ್ಲಿ ಭಾಗವಹಿಸಬೇಕೆಂದು ಕೋರಿದೆ. ಇಸ್ಕಾನ್ ಬೆಂಗಳೂರಿನ ಯೂಟ್ಯೂಬ್ ಚಾನೆಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳನ್ನು ಭೇಟಿಮಾಡಬಹುದಾಗಿದೆ. www.iskconbangalore.org






 Advertisement 




Sign in to your account
Username or Email Address


Password

 Remember Me


