ಧಾರವಾಡ: ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ತನಿಖೆ ಬಗ್ಗೆ ನಾವು ಓಪನ್ ಡಿಸ್ಕಷನ್ ಮಾಡುವುದು ಇರುವುದಿಲ್ಲ, ಅಧಿಕಾರಿಗಳು ಆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈ ಸಣ್ಣ ವಿಷಯವನ್ನು ಬೆಳೆಸುವ ಅವಶ್ಯಕತೆ ಇಲ್ಲ, ಗೃಹ ಇಲಾಖೆ ಮುಖ್ಯಮಂತ್ರಿಗಳ ನಂತರದ ಅತ್ಯಂತ ಲೋಡ್ ಇರುವ ಇಲಾಖೆ. ಎಲ್ಲೋ ತಪ್ಪಾದರೂ ಅದನ್ನು ಗೃಹ ಮಂತ್ರಿಗೆ ಕಟ್ಟುವುದು ತಪ್ಪು ಎಂದರು. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್ಹೊಸ ವಿಷಯ ತಿಳಿದುಕೊಂಡು ಕೆಲಸ ಮಾಡಲು ಸ್ವಲ್ಪ ಸಮಯ ಹಿಡಯುತ್ತದೆ. ಗೃಹ ಮಂತ್ರಿ ಬಹಳ ಸಮಾಧಾನದ ರಾಜಕಾರಣಿ, ಅರಗ ಜ್ಞಾನೇಂದ್ರ ಅವರಿಗೆ ಇಲಾಖೆ ಗ್ರಿಪ್ ಸಿಕ್ಕಿದೆ ಎಂದರು.Sign in to your account
Username or Email Address


Password

 Remember Me


