ನೆಲಮಂಗಲ: ಚಿರತೆಯೊಂದು ಹೊಂಚುಹಾಕು ಹಾಕಿ ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಂಟನಕುರ್ಚಿ ಗ್ರಾಮದಲ್ಲಿ ನಡೆದಿದೆ.ಮಂಟನಕುರ್ಚಿ ಗ್ರಾಮದ ಮಂಜುನಾಥ್ ಎಂಬುವವರ ತೋಟದ ಮನೆಯ ಮುಂದೆ ಕಾಣಿಸಿಕೊಂಡಿರುವ ಚಿರತೆ ಮನೆಯ ಬಾಗಿಲ ಮುಂದೆ ಮಲಗಿದ್ದ ಎರಡು ನಾಯಿ ಮರಿಗಳಲ್ಲಿ ಒಂದು ಮರಿಯನ್ನು ಸಂಚು ಹಾಕಿ ಕ್ಷಣ ಮಾತ್ರದಲ್ಲಿ ಹೊತ್ತೋಯ್ದಿದೆ. ಇದನ್ನೂ ಓದಿ:  ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾಚಿರತೆಯ ಚಲನವಲಗಳು ಮನೆಯ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ಭೇಟಿ ವೇಳೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿ ಆತಂಕ ವ್ಯಕ್ತಪಡಿಸಿದ್ದು ಚಿರತೆ ಸೆರೆಗೆ ಬೋನ್ ಇಡಲು ಮನವಿ ಮಾಡಿದ್ದಾರೆ.Sign in to your account
Username or Email Address


Password

 Remember Me


