ಮೈಸೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇಂದು ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದಿದ್ದಾರೆ. ಬಳಿಕ ಜಲದರ್ಶಿನಿಗೆ ತೆರಳಿ ನಂತರ ಪೊಲೀಸ್ ಕಮೀಷರ್ ಕಚೇರಿಗೆ ತೆರಳಿದ್ದಾರೆ.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಗೃಹ ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಮಾಡಿದ್ದೇನೆ. ದರ್ಶನ ಮಾಡಿ ನನಗೆ ತುಂಬಾ ಸಂತೋಷವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನನಗೆ, ನಮ್ಮ ಪೊಲೀಸ್ ಇಲಾಖೆಗೆ ಶಕ್ತಿಕೊಡುವಂತೆ ಕೇಳಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಜಗತ್ತು ಒಟ್ಟಾಗಿ ಹೋರಾಡಬೇಕು: ಭಾರತರಾಜ್ಯದ ಜನತೆ ಒಳ್ಳೆದು ಮಾಡ್ಲಿ, ಒಳ್ಳೆಯ ಮನಸ್ಸು ಕೊಡ್ಲಿ ಎಂದು ಪ್ರಾರ್ಥಿಸಿದ್ದೇನೆ. ಕಾನೂನು ಸುವ್ಯವಸ್ಥೆ ಹತೋಟಿಗೆ ಬರುವಂತೆ ಪ್ರಾರ್ಥಿ ಸಿದ್ದೀನಿ. ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆ ಆಗೋದಲ್ಲ, ಕ್ರೈಂ ಆಗದಂತೆ ಚಾಮುಂಡೇಶ್ವರಿ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯಅರಮನೆ ನಗರಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಗೃಹ ಇಲಾಖೆಯಲ್ಲಿ ಅಡಿಯಲ್ಲಿ ಬರುವುದು ಸಚಿವರಿಗೆ ಗೊತ್ತಿಲ್ಲವಾ..?. ಪ್ರಕರಣದ ಗಂಭೀರತೆ ಗೊತ್ತಾಗಿದ್ರೆ ಮೊನ್ನೆಯೇ ಮೈಸೂರಿಗೆ ತೆರಳಿ ಪ್ರಕರಣದ ಗಂಭೀರತೆ ಅರ್ಥಮಾಡಿಕೊಳ್ಳಬೇಕಿತ್ತು. ಸದಾ ಸ್ವರ್ಗ ಎನ್ನುತ್ತಿದ್ದ ಮೈಸೂರಲ್ಲಿ ಸರಣಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಪ್ರಕರಣಗಳು ನಡೆದಿವೆ. ಆದರೂ ಅರಗ ಜ್ಞಾನೇಂದ್ರ ಏನೂ ನಡೆಯುತ್ತಿಯಲ್ಲವೇನೋ ಎಂಬಂತೆ ಇದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗುSign in to your account
Username or Email Address


Password

 Remember Me


