ಬೆಂಗಳೂರು: ರಾಜ್ಯದಲ್ಲಿ ಇಂದು 1,213 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 25 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 1,206 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮರಣ ಪ್ರಮಾಣ ನಿಧಾನವಾಗಿ ಏರುತ್ತಿದ್ದು, ಶೇ.2.06ಕ್ಕೆ ತಲುಪಿದೆ.ರಾಜ್ಯದಲ್ಲಿ 19,300 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ರೇಟ್ ಶೇ.0.64ರಷ್ಟಿದೆ. ಮರಣ ಪ್ರಮಾಣ ಶೇ.2.06ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 29,43,463 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 37,231 ಜನ ಸಾವನ್ನಪ್ಪಿದ್ದಾರೆ. 28,86,906 ಜನ ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿ- ಚಕ್ರವರ್ತಿ ಸೂಲಿಬೆಲೆ ಒತ್ತಾಯಒಟ್ಟು 1,87,187 ಸ್ಯಾಂಪಲ್ (ಆರ್ ಟಿಪಿಸಿಆರ್ 1,53,298 + 33,889 ಆ್ಯಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 319 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 205 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 7,343 ಸಕ್ರಿಯ ಪ್ರಕರಣಗಳಿವೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 5, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 319, ಬೀದರ್ 0, ಚಾಮರಾಜನಗರ 11, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 21, ಚಿತ್ರದುರ್ಗ 9, ದಕ್ಷಿಣ ಕನ್ನಡ 269, ದಾವಣಗೆರೆ 12, ಧಾರವಾಡ 12, ಗದಗ 1, ಹಾಸನ 90, ಹಾವೇರಿ 1, ಕಲಬುರಗಿ 5, ಕೊಡಗು 65, ಕೋಲಾರ 15, ಕೊಪ್ಪಳ 3, ಮಂಡ್ಯ 27, ಮೈಸೂರು 98, ರಾಯಚೂರು 0, ರಾಮನಗರ 4, ಶಿವಮೊಗ್ಗ 44, ತುಮಕೂರು 19, ಉಡುಪಿ 113, ಉತ್ತರ ಕನ್ನಡ 18 ಕೊರೊನಾ ಕೇಸ್ ಪತ್ತೆಯಾಗಿದ್ದು, ವಿಜಯಪುರ ಮತ್ತು ಯಾದಗಿರಿಯಲ್ಲಿ ಯಾವುದೇ ಕೊರೊನಾ ಪ್ರಕರಣ ಕಾಣಿಸಿಕೊಂಡಿಲ್ಲ.Sign in to your account
Username or Email Address


Password

 Remember Me


