ಚಿಕ್ಕಬಳ್ಳಾಪುರ: ಬುಧವಾರ ನಂದಿಬೆಟ್ಟದ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಭೂಕುಸಿತ ಆಗಿತ್ತು. ಆದ್ರೆ ಭೂಕುಸಿತ ಆಗೋಕೆ ಭಾರೀ ಪ್ರಮಾಣದ ಮಳೆ ಅನ್ನೋದು ಬಹುತೇಕರ ಅಭಿಪ್ರಾಯವಾದ್ರೂ ಕೆಲವರ ವಾದವೇ ಬೇರೆ ಇದೆ. ಭಾರೀ ಪ್ರಮಾಣದ ಭೂಕುಸಿತಕ್ಕೆ ಕಲ್ಲು ಗಣಿಗಾರಿಕೆ-ಬೆಟ್ಟದ ತಪ್ಪಲಲ್ಲಿ ಭೂಮಿ ಮಾಡೋಕೆ ಭೂಗಳ್ಳರ ಮಾಡ್ತಿರೋ ಕೃತ್ಯಗಳೇ ಕಾರಣ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.ವಿಶ್ವವಿಖ್ಯಾತ ನಂದಿಬೆಟ್ಟದ ಬಳಿ ಭೂಕುಸಿತ ಉಂಟಾಗಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಪರಿಣಾಮ ನಂದಿಗಿರಿಧಾಮಕ್ಕೆ ಶಾಶ್ವತವಾಗಿ ರಸ್ತೆ ನಿರ್ಮಾಣ ಮಾಡೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಮಧ್ಯೆ ಹಿಂದೆಂದೂ ಆಗದ ಅಷ್ಟೊಂದು ದೊಡ್ಡ ಮಟ್ಟದ ಭೂ ಕುಸಿತ ಆಗಿದ್ದಾದ್ರೂ ಹೇಗೆ ಅನ್ನೋ ಅನುಮಾನ ಹಲವರದ್ದಾಗಿದೆ. ಬಹುತೇಕರು ಭಾರೀ ಮಳೆಯ ಪರಿಣಾಮ ಗುಡ್ಡ ಕುಸಿತ ಆದ್ರೂ, ಕಾರಣ ಬೇರೆಯೇ ಇದೆ ಅಂತಾರೆ.ನಂದಿಗಿರಿ, ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ಚನ್ನಗಿರಿಗಳು ಒಂದಕ್ಕೊಂದು ಆಂಟಿಕೊಂಟಿವೆ. ಒಂದೆಡೆ ಚಿಕ್ಕಬಳ್ಳಾಪುರದ ಕಣಿವೆನಾರಾಯಣಪುರದ ಬಳಿ, ಮತ್ತೊಂದೆಡೆ ದೇವನಹಳ್ಳಿಯ ತೈಲಗೆರೆ ಬಳಿ ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಲಾಗ್ತಿದೆ. ಇದುವೇ ಭೂಕುಸಿತಕ್ಕೆ ಕಾರಣ ಆಗಿರಬಹುದು ಅಂತಾ ಪರಿಸರವಾದಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ದೋಸೆ ಮಾಡುವಾತ ಲಕ್ಷಾಂತರ ರೂಪಾಯಿ ವಂಚನೆ-ಕಡಬದಿಂದ ಮೈಸೂರಿಗೆ ಪರಾರಿನಂದಿಗಿರಿಧಾಮದ ತಪ್ಪಲಿನ ಭೂಮಿಗೆ ಬಂಗಾರದ ಬೆಲೆಯಿದೆ. ಹೀಗಾಗಿ ನಂದಿಬೆಟ್ಟದ ಸುತ್ತಲೂ ಬೆಟ್ಟದ ಬುಡಕ್ಕೆ ಕನ್ನ ಹಾಕ್ತಿರೋ ಭೂಗಳ್ಳರು, ರಾಜಾರೋಷವಾಗಿ ಕಲ್ಲು ಬಂಡೆ ಕರಗಿಸಿ, ಬೆಟ್ಟದ ಬುಡವನ್ನ ಅಗೆದು ಬಗೆದು ಸಮತಟ್ಟು ಮಾಡಿ ಜಮೀನು ಮಾಡಿಕೊಳ್ಳುತ್ತಿದ್ದಾರೆ. ಇದು ಸಹ ಬೆಟ್ಟದ ಹಿಡಿತವನ್ನ ಕಡಿಮೆ ಮಾಡಿ ಭೂಕುಸಿತ ಆಗೋಕೆ ಕಾರಣ ಆಗುತ್ತಿದೆ ಎಂದು ಸ್ಥಳೀಯರಾದ ಚಿಕ್ಕೇಗೌಡ ಹೇಳುತ್ತಾರೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧಒಟ್ಟಿನಲ್ಲಿ ನಂದಿಬೆಟ್ಟದ ತಪ್ಪಲಲ್ಲಿ ಮೇಲ್ನೋಟಕ್ಕೆ ಭಾರೀ ಪ್ರಮಾಣದ ಮಳೆ ಬಂದು ಭೂ ಕುಸಿತ ಆಗಿದೆ ಅನ್ನೋದು ಅಧಿಕಾರಿಗಳ ಪ್ರಾಥಮಿಕ ಮಾಹಿತಿ. ಪರಿಸರವಾದಿಗಳು, ಪ್ರಜ್ಞಾವಂತರ ಅನುಮಾನಗಳನ್ನ ಸುಖಾಸುಮ್ಮನೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆದು ಆಸಲಿ ಸತ್ಯ ಹೊರಬರಬೇಕಿದೆ.Sign in to your account
Username or Email Address


Password

 Remember Me


