ಬೆಂಗಳೂರು: ಬಿಗ್ ಬಾಸ್ ಸೀಸನ್-7ರ ವಿಜೇತ ನಟ ಶೈನ್ ಶೆಟ್ಟಿ ಹೊಸ ದುಬಾರಿ ಕಾರೊಂದು ಖರೀದಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕನ್ನಡದ ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಪ್ರೇಕ್ಷಕರ ಮನಗೆಲ್ಲುವ ಮೂಲಕ ಬೇಷ್ ಎನ್ನಿಸಿಕೊಂಡಿದ್ದ ಶೈನ್ ಶೆಟ್ಟಿ, ಸದ್ಯ ಕಿರುತೆರೆಯಿಂದ ಇದೀಗ ಬೆಳ್ಳಿ ತೆರೆಯತ್ತ ಮುಖ ಮಾಡಿದ್ದಾರೆ. ಈ ಮಧ್ಯೆ ಶೈನ್ ಶೆಟ್ಟಿ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ. ಸದ್ಯ ಕಾರಿನ ಮುಂದೆ ಶೈನ್ ಶೆಟ್ಟಿ ತಮ್ಮ ತಾಯಿಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಶೈನ್ ಶೆಟ್ಟಿ ಕೈ ಸೇರಿದ ಬಿಗ್‍ಬಾಸ್ ಕಾರುCongratulations shine brother ???????? happy to see your success… Keep shining always…✌️#ShineShetty #BMW@ShineShetty_ pic.twitter.com/krwLrFwett— SHINE SHETTY FC™ (@shineshettyFC) August 21, 2021ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದಲ್ಲಿ ಸದ್ಯ ಶೈನ್ ಶೆಟ್ಟಿ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರೀಕರಣದ ವೇಳೆ ಫೋಟೋವೊಂದನ್ನು ಸೆರೆಹಿಡಿಯಲಾಗಿತ್ತು. ವೈರಲ್ ಆದ ಈ ಫೋಟೋದಲ್ಲಿ ಪುನೀತ್, ಶೈನ್ ಶೆಟ್ಟಿ, ಹಾಸ್ಯ ನಟ ಚಿಕ್ಕಣ್ಣ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ನಯನಾ, ಹಂಸ ಪ್ರತಾಪ್, ಕಾವ್ಯಾ ಶಾಸ್ತ್ರಿ ಇರುವುದನ್ನು ಕಾಣಬಹುದಾಗಿದೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಪ್ರಿಯಾ ಆನಂದ್ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶಿಸುತ್ತಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಆಕ್ಷನ್ ಸಿನಿಮಾ #ಜೇಮ್ಸ್ ಶೂಟಿಂಗ್ ಸೆಟ್ ನಿಂದ ಹೊರಬಿದ್ದಿರುವ ಅದ್ದೂರಿ pic ನಿಮಗಾಗಿ ????????#namcinema #james #BoloBoloJames #powerstar #puneethrajkumar #ShineShetty@PuneethRajkumar pic.twitter.com/Sk6AR4pUJ4— SHINE SHETTY FC™ (@shineshettyFC) July 24, 2021ಕೆಲವು ದಿನಗಳ ಹಿಂದೆ ಜೊತೆ ಜೊತೆ ಸಿರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕೂಡ ಬಿಎಂಡಬ್ಲೂ ಮತ್ತು ಎಂಜಿ ಹೆಕ್ಟರ್ ಕಾರನ್ನು ಖರೀದಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದರು. ಇದನ್ನೂ ಓದಿ:ದುಬಾರಿ ಬೆಲೆಯ 2 ಕಾರು ಖರೀದಿಸಿದ ಮೇಘಾ ಶೆಟ್ಟಿSign in to your account
Username or Email Address


Password

 Remember Me


