ತುಮಕೂರು:  ಬೆತ್ತಲೆಯಾಗಿ  ಮಹಿಳೆಯೋರ್ವಳ ಶವ ಪತ್ತೆಯಾಗಿರುವ ಘಟನೆ ತುಮಕೂರು ತಾಲೂಕಿನ ಹೀರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದ ಬಳಿ ನಡೆದಿದೆ.35 ವರ್ಷದ ಜಯಲಕ್ಷ್ಮಿ ಕೊಲೆಯಾಗಿರುವ ಮಹಿಳೆ. ನಿನ್ನೆ ಬೆಟ್ಟದ ಮೇಲೆ ಹಸು ಮೇಯಿಸಲು ಜಯಲಕ್ಷ್ಮೀ ಒಬ್ಬರೇ ಹೋಗಿದ್ದಾರೆ. ಸಂಜೆಯಾದರೂ ಮನೆಗೆ ವಾಪಸ್ ಬರದೇ ಇದ್ದದನ್ನು ನೋಡಿ ಪತಿ ಶಿವಕುಮಾರ್ ಹುಡುಕಾಟ ಶುರುಮಾಡಿದ್ದಾರೆ. ಆಗ ಬೆಟ್ಟದ ಮೇಲಿನ ಪೊದೆಯಲ್ಲಿ ಜಯಲಕ್ಷ್ಮೀಯ ಬೆತ್ತಲೆಯಾಗಿ ಬಿದ್ದಿದ್ದ ಮೃತದೇಹ ಕಂಡು ಬೆಚ್ಚಿಬಿದ್ದಿದಾರೆ. ಜೊತೆಗೆ ಮೃತ ದೇಹದ ಮೇಲೆ ಕಚ್ಚಿದ ಗಾಯದ ಕಲೆಗಳು ಕಂಡುಬಂದಿದೆ. ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತೊಯ್ದಿದ್ದು, ಅಪರಿಚಿತ ಯುವಕರ ಗುಂಪು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶಚೋಟಾಸಾಬ್‍ರ ಗ್ರಾಮಕ್ಕೆ ಹೊಂದಿಕೊಂಡಿರುವ ಈ ನಿರ್ಜನ ಬೆಟ್ಟದ ಮೇಲೆ ಮೇಲಿಂದ ಮೇಲೆ ಅಪರಿಚಿತ ಯುವಕರ ಗುಂಪು ಸೇರಿಕೊಂಡು ಮದ್ಯಪಾನ, ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ – 130 ಕೋಟಿ ರೂ. ನಿರೀಕ್ಷೆಗಾಂಜಾ ಸೇವನೆ ನಶೆಯಲ್ಲಿ ಗ್ಯಾಂಗ್ ರೇಪ್ ನಡೆದಿರಬಹುದು ಎಂದು ಮೃತಳ ಸಂಬಂಧಿಕರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


