ಬೆಂಗಳೂರು: ಸ್ವೆಟರ್ ಹಗರಣದಲ್ಲಿ ಹೆಸರು ಕೇಳಿಬರುತ್ತಿರುವ ಜಗ್ಗೇಶ್ ಅಥವಾ ಕೋಮಲ್ ಬಗ್ಗೆ ಮಾತನಾಡಲ್ಲ. ಅವರು ಇನ್ವಾಲ್ ಆಗಿದಾರೋ ಇಲ್ವೋ ಗೊತ್ತಿಲ್ಲ. ಅದು ಅವರ ವೈಯುಕ್ತಿಕ ವಿಚಾರ. ಆದರೆ ಸಂಧಾನ ಸಭೆ ನಡೆಸಿದ್ದಾರೆ ಎಂದರೆ ಅಲ್ಲಿ ಏನೋ ನಡೆದಿದೆ, ಏನೋ ಫೈಲೂರ್ ಆಗಿದೆ ಅಂತ ಅರ್ಥ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.ಸ್ವೆಟರ್ ಹಗರಣದಲ್ಲಿ ಸರ್ಕಾರ ಮತ್ತು ಒಂದು ಕಾರ್ಪೊರೇಷನ್ ಏನು ಮಾಡಿದೆ? ಸ್ವೆಟರ್ ಕೊಡೋದು ಸಂತೋಷ, ಟೆಂಡರ್ ಕರೆದಿದ್ದು ಸಂತೋಷ, ದುಡ್ಡು ಕೊಟ್ಟಿದ್ದು ಸಂತೋಷ. ಆದರೆ ಯಾರಿಗೆ ಸ್ವೆಟರ್ ಕೊಟ್ಟಿದ್ದಾರೆ? ಸ್ವೆಟರ್ ಎಲ್ಲಿದೆ? ಶಾಲೆ ಎಲ್ಲಿ ಆರಂಭವಾಗಿತ್ತು? ಇದಕ್ಕೆ ಕಾರ್ಪೊರೇಷನ್, ಸರ್ಕಾರ ಉತ್ತರಿಸಬೇಕು. ಮುಖ್ಯಮಂತ್ರಿಗಳು ಇದಕ್ಕೆ ಜವಬ್ದಾರಿ. ಸಂಧಾನ ಸಭೆ ಯಾಕೆ ನಡೆಸುತ್ತಾರೆ. ಈ ಸಭೆಗೆ ಕಮೀಷನರ್ ಹೋಗಬಾರದು. ಸಂಧಾನ ಸಭೆ ನಡೆಸುತ್ತಿದ್ದಾರೆ ಎಂದರೆ ಏನೋ ಹೆಚ್ಚುಕಮ್ಮಿ ಆಗಿದೆ ಅಂತ ಅರ್ಥ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪಕಾಂಗ್ರೆಸ್ ಕಾರ್ಯಕರ್ತರ ಬಂಧನ ವಿಚಾರವಾಗಿ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೋಸ್ಟರ್ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ನಾಯಕರ ವಿರುದ್ಧ ಯಾರೇ ಹೇಳಿಕೆ ಕೊಟ್ಟರು ನಮ್ಮ ಕಾರ್ಯಕರ್ತರು ಹೋರಾಟ ಮಾಡುತ್ತಾರೆ. ನಮ್ಮ ಕಾರ್ಯಕರ್ತರ ವಿರುದ್ಧ ಎಷ್ಟು ಬೇಕಾದರು ಕೇಸ್ ಹಾಕಲಿ ಇದಕ್ಕೆಲ್ಲಾ ಹೆದರಲ್ಲ ಮುಂದೆಯು ಹೋರಾಟ ಮಾಡುತ್ತೇವೆ ಎಂದು ಗುಡುಗಿದರು. ಇದನ್ನೂ ಓದಿ: 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್






 Advertisement 




Sign in to your account
Username or Email Address


Password

 Remember Me


