ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಬ್ಯುಸಿ ಶೆಡ್ಯುಲ್ ಮಧ್ಯೆ ಕುಟುಂಬ ಸಮೇತ ಮದುವೆ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ.ಸಿನಿಮಾದ ಜೊತೆ ಜೊತೆಗೆ ಕುಟುಂಬಕ್ಕೂ ಅಷ್ಟೇ ಸಮಯ ಮೀಸಲಿಡುವ ಸುದೀಪ್ ಒಬ್ಬರು ‘ಬೆಸ್ಟ್ ಫ್ಯಾಮಿಲಿ ಮ್ಯಾನ್’ ಎಂದೇ ಹೇಳಬಹುದು. ಇತ್ತೀಚೆಗಷ್ಟೇ ಸುದೀಪ್ ತಮ್ಮ ಸಂಬಂಧಿಕರ ಮದುವೆಗೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆಗೆ ತೆರಳಿದ್ದಾರೆ. ಇದೇ ವೇಳೆ ಸುದೀಪ್ ಸಹೋದರಿ, ಸಹೋದರಿಯ ಮಗ ಇತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಇದೀಗ ಸುದೀಪ್ ಕುಟುಂಬ ಸಮೇತ ಕ್ಲಿಕ್ಕಿಸಿಕೊಂಡಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಸುದೀಪ್ ಪೈಜಾಮದ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರೆ, ಪ್ರಿಯಾ ಸುದೀಪ್ ಸೀರೆಯುಟ್ಟು ಸಾಂಪ್ರದಾಯಿಕ  ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ#ExclusivePicture.!????
ಸಂಬಂಧಿಕರ ಮದುವೆಯಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಣ್ಣನ ಕುಟುಂಬ ????❤️#Kotigobba3 #VikrantRona#KicchaSudeep #KicchaForever@KicchaSudeep @iampriya06 @sanchithsanjeev @SujathaSanjeev #KicchanaAdda @KicchanaAdda pic.twitter.com/5ZVPEsp6lN— KicchanaAdda???? (@KicchanaAdda) August 23, 2021ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಸ್ಟೈಲಿಶ್ ನಟರಾಗಿ ಮಿಂಚುತ್ತಿರುವ ಸುದೀಪ್, ಇತ್ತೀಚೆಗಷ್ಟೇ ಸುದೀಪ್ ಹೊಸ ಹೇರ್ ಸ್ಟೈಲ್‍ವೊಂದನ್ನು ಮಾಡಿಕೊಂಡಿದ್ದು, ಅದರ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಸಾಂಪ್ರದಾಯಿಕ ಉಡುಪಿನಲ್ಲಿಯೂ ಸಖತ್ ಹ್ಯಾಂಡ್‍ಸಮ್ ಆಗಿ ಮಿಂಚುತ್ತಿರುವ ಸುದೀಪ್ ಫೋಟೋ ನೋಡಿ ಅಭಿಮಾನಿಗಫುಲ್ ಫಿದಾ ಆಗಿದ್ದಾರೆ.  A post shared by KICCHA SUDEEP FANS ???? (@rbksfa_official)ಸೆಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬ ಇರುವುದರಿಂದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಬಿಡುಗಡೆ ದಿನಾಂಕ ಹಾಗೂ ವಿಕ್ರಾಂತ್ ರೋಣ ಸಿನಿಮಾ ಕುರಿತಂತೆ ಅಪ್‍ಡೇಟ್ಸ್ ಸಿಗಲಿದೆ ಎಂದು ಕಿಚ್ಚನ ಅಭಿನಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ






 Advertisement 




Sign in to your account
Username or Email Address


Password

 Remember Me


