ಬೆಂಗಳೂರು/ಆನೇಕಲ್: ವರದಕ್ಷಿಣೆ ಕಿರುಕುಳ ಹಿನ್ನೆಲೆ ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶೃತಿ (32) ಮೃತ ಮಹಿಳೆಯಾಗಿದ್ದು, ಹೆಚ್.ಎಸ್.ಆರ್ ಲೇಔಟ್ ನಿವಾಸಿಯಾದ ಇವರನ್ನು 2014 ರಲ್ಲಿ ಹೊರಮಾವು ಮುಖ್ಯರಸ್ತೆ ಬಾಣಸವಾಡಿಯ ಮುನಿರೆಡ್ಡಿ ಬಡಾವಣೆಯ ಮಿಥುನ್ ರೆಡ್ಡಿ ಎಂಬವರಿಗೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಅಂದಿನಿಂದಲೂ ಗಂಡ ಹಾಗೂ ಅತ್ತೆ ಭಾಗ್ಯಮ್ಮಳ ವರದಕ್ಷಿಣೆ ಭೂತ ಶೃತಿಯನ್ನು ಕಾಡತೊಡಗಿದ್ದು, ಕಳೆದ ಶುಕ್ರವಾರ ವರಮಹಾಲಕ್ಷೀ ಹಬ್ಬದಂದು ಶೃತಿ ಗಂಡ ಹಾಗೂ ಅತ್ತೆ ತವರು ಮನೆಯಿಂದ ಒಂದು ಲಕ್ಷ ರೂ. ಹಣ ತರುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಒನ್ ಸೈಡ್ ಲವ್ – ಬೆಳ್ಳಂಬೆಳಗ್ಗೆ ಯುವತಿ ತಂದೆಯ ಬರ್ಬರ ಕೊಲೆಹಾಗಾಗಿ 35 ಸಾವಿರ ಹಣ ತಂದು ಕೊಟ್ಟು, 65 ಸಾವಿರ ಬಾಕಿ ಉಳಿಸಿಕೊಂಡಿದ್ದ ಶೃತಿಗೆ ಬಾಕಿ ಹಣ ತರುವಂತೆ ಸೋಮವಾರ ಸಂಜೆ ಗಂಡ ಮಿಥುನ್ ಹಾಗೂ ಅತ್ತೆ ಭಾಗ್ಯಮ್ಮ ಶೃತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮನನೊಂದು ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿ ನಗರ ಪೊಲೀಸರು ಗಂಡ ಹಾಗೂ ಅತ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಅತ್ತೆ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಕೆಂಡದ ಮೇಲೆ ನಡೆದ ಸೊಸೆ






 Advertisement 




Sign in to your account
Username or Email Address


Password

 Remember Me


