ಬೆಂಗಳೂರು/ನೆಲಮಂಗಲ: ಒನ್ ಸೈಡ್ ಲವ್ ಬೇಡ ಎಂದು ಬುದ್ದಿವಾದ ಹೇಳಿ ಕಳಿಸಿದ್ದಕ್ಕೆ ಯುವತಿಯ ತಂದೆಯನ್ನೇ ಯುವಕ ಹತ್ಯೆಗೈದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ನಡೆದಿದ್ದು, ಇಂದು ಬೆಳಗ್ಗೆ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ನಾಗಪ್ಪ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ಇತ್ತೀಚೆಗೆ ಮನೆ ಕಟ್ಟಿಕೊಂಡು ವಾಸವಿದ್ದರು. ಪೆಪ್ಸಿಕೋ ಕಂಪೆನಿಗೆ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಅಡ್ಡಗಟ್ಟಿದ ಇಬ್ಬರು ಯುವಕರು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.ಸೋಮವಾರ ನರೇಶ್ ಎಂಬ ಯುವಕ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಾಗಪ್ಪ ಅವರ ಮನೆಯ ಮುಂದೆ ಗಲಾಟೆ ಮಾಡಿದ್ದು, ಈ ವಿಚಾರವಾಗಿ ಯುವಕ ನರೇಶ್‍ಗೆ ಬುದ್ದಿವಾದ ಹೇಳಿದ್ದರಂತೆ, ಇದರಿಂದ ಕೋಪಗೊಂಡ ಪಾಗಲ್ ಪ್ರೇಮಿ ನರೇಶ್ ಈ ಕೊಲೆ ಮಾಡಿರುವುದಾಗಿ ಮೃತ ನಾಗಪ್ಪನ ಸಂಬಂಧಿ ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅತ್ತೆ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಕೆಂಡದ ಮೇಲೆ ನಡೆದ ಸೊಸೆಮೃತ ನಾಗಪ್ಪ ತನ್ನ ಮಗನ ಜೊತೆ ಬಸ್ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಳ್ಳುವ ವೇಳೆ ಅಡ್ಡಗಟ್ಟಿದ ಯುವಕರು ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಹೆಚ್ಚಿನ ವಿಚಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್






 Advertisement 




Sign in to your account
Username or Email Address


Password

 Remember Me


