ಹುಬ್ಬಳ್ಳಿ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗೆ ಕನ್ನ ಹಾಕಲು ಯತ್ನಿಸಿದ ಕಳ್ಳರು ಲಾಕರ್ ತೆರೆಯಲಾಗದೆ ನಿರಾಸೆ ಅನುಭವಿಸಿದ್ದಾರೆ.ಶಿವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಕಿಟಕಿಯ ಸರಳು ಮುರಿದು ಕಳ್ಳರು ಬ್ಯಾಂಕಿನ ಒಳ ನುಗ್ಗಿ ಕನ್ನ ಹಾಕುವ ಯತ್ನ ವಿಫಲವಾಗಿದೆ. ಬ್ಯಾಂಕಿನ ಹಿಂಭಾಗದ ಕಿಟಕಿಯ ಮೂರು ಸರಳುಗಳನ್ನು ಕಟರ್ ನಿಂದ ಕಟ್ ಮಾಡಿ ಕಳ್ಳರು, ಕಿಟಕಿಯ ಮೂಲಕ ಬ್ಯಾಂಕ್‍ನ ಒಳ ನುಗ್ಗಿದ್ದಾರೆ. ಅದರೆ ಬ್ಯಾಂಕ್ ಲಾಕರ್ ತೆಗೆಯಲು ಕಳ್ಳರು ವಿಫಲವಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳಿದ್ದಾರೆ.  ಇದನ್ನೂ ಓದಿ: ಪಾರ್ಕಿಗೆ ಬಾ ಅಂತಿದ್ಳು – ಅಂಕಲ್‍ಗಳೇ ಈಕೆಯ ಟಾರ್ಗೆಟ್!ಘಟನೆಯ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಾವುಗಳಿಗೆ ಸೋದರಿಯರಿಂದ ರಾಖಿ ಕಟ್ಟಿಸಲು ಹೋಗಿ ಪ್ರಾಣ ಬಿಟ್ಟ ಯುವಕSign in to your account
Username or Email Address


Password

 Remember Me


