ತುಮಕೂರು: ನಾಳೆಯಿಂದ 9 ರಿಂದ 12ನೇ ತರಗತಿವರೆಗೆ ತರಗತಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಒತ್ತಾಯ ಪೂರ್ವಕವಾಗಿ ಶಾಲೆಗೆ ಬರಬೇಕೆಂದು ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.ತುಮಕೂರಿನಲ್ಲಿ ಶಾಲೆಗಳ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನ ಮಾಡಿದರೂ ಆನ್ ಲೈನ್ ನಲ್ಲಿ ಒಳ್ಳೆಯ ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ. ಬೇರೆ, ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಿಲ್ಲ. ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮ ಇರುವುದರಿಂದ ತರಗತಿ ಆರಂಭ ಮಾಡುವಂತೆ ಸಿಎಂ ಘೋಷಣೆ ಮಾಡಿದ್ದಾರೆ ಹಾಗಾಗಿ ಶಾಲೆ ಆರಂಭಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯ ರೈತ ಹೋರಾಟದ ಬಗ್ಗೆ ಜಾಗೃತಿಗೊಳಿಸಿ ಅಕ್ಟೋಬರ್ 2ರಿಂದ ಕಿಸಾನ್ ಸ್ವರಾಜ್ ಯಾತ್ರೆಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಇದಲ್ಲದೇ ಆನ್‍ಲೈನ್ ಮತ್ತು ಆಫ್‍ಲೈನ್ ನಲ್ಲಿಯೂ ತರಗತಿಗಳು ನಡೆಯಲಿವೆ. ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಕಂಟಕವಾಗಲಿದೆ ಅನ್ನುವುದಿತ್ತು. ಈಗ ಒಂದು ತಿಂಗಳಿಂದ ಎಲ್ಲಾ ತಜ್ಞರು ಮಕ್ಕಳ ಮೇಲೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಜೊತೆಗೆ ಸೋಂಕು ತಗುಲಿದರು ಪ್ರಾಣ ಹಾನಿಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ಹಂತದಲ್ಲಿ 1 ರಿಂದ 8ನೇ ತರಗತಿವರೆಗೂ ಶಾಲೆ ತೆರೆಯುವ ಪ್ರಯತ್ನ ಮಾಡುತ್ತೇವೆ ಎಂದು ನುಡಿದಿದ್ದಾರೆ.ಪಾಸಿಟಿವಿಟಿ ರೇಟ್ ಶೇ. 2ಕ್ಕಿಂತ ಹೆಚ್ಚಿದ್ದರೆ ಆ ಜಿಲ್ಲೆಯ ಶಾಲೆಗಳನ್ನು ಪ್ರಾರಂಭಿಸುವುದಿಲ್ಲ. ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ 2% ಕ್ಕಿಂತ ಹೆಚ್ಚಿದೆ ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ. ಇದನ್ನೂ ಓದಿ:ಕೆರೆ ಏರಿ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು- ರೈತರು ಕಂಗಾಲು






 Advertisement 




Sign in to your account
Username or Email Address


Password

 Remember Me


