ದಾವಣಗೆರೆ: ವರಮಹಾಲಕ್ಷ್ಮೀ ಪೂಜೆಗೆಂದು ಚಿನ್ನದ ಆಭರಣಗಳನ್ನು ಹೊರ ತೆಗೆದು, ಮಹಾಲಕ್ಷ್ಮೀಗೆ ತೊಡಿಸಿ ಪೂಜೆ ಮಾಡಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, 3.90 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಎಗರಿಸಿದ್ದಾರೆ.ನಗರದ ಡಿಸಿಎಂ ಟೌನ್ ಶಿಪ್ ನಲ್ಲಿರುವ ಪ್ರಸನ್ನ ಅವರ ಮನೆಯಲ್ಲಿ ಕಳವು ಮಾಡಿದ್ದು, ಮನೆಯಲ್ಲಿದ್ದ 3.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ವರಮಹಾಲಕ್ಷ್ಮೀ ಪೂಜೆಗೆಂದು ಚಿನ್ನದ ಆಭರಣಗಳನ್ನು ತರಲಾಗಿತ್ತು. ಪೂಜೆ ಮಾಡಿದ ಬಳಿಕ ಮನೆಯವರು ದೇವರ ಮೇಲೆ ಆಭರಣಗಳನ್ನು ಹಾಗೇ ಬಿಟ್ಟಿದ್ದರು. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರುಕಿಟಕಿ ತೆಗೆದು ದೇವರ ಮೇಲಿದ್ದ ಆಭರಣಗಳನ್ನು ಕಳವು ಮಾಡಿದ್ದಾರೆ. ಆರಂಭದಲ್ಲಿ ಚಿನ್ನಾಭರಣ ಕಳವಾಗಿರುವುದು ಯಾರಿಗೂ ತಿಳಿದಿಲ್ಲ. ಬಳಿಕ ಅರಿವಾಗಿದ್ದು, ತಕ್ಷಣ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.Sign in to your account
Username or Email Address


Password

 Remember Me


