ಬೆಂಗಳೂರು: ಅಫ್ಘಾನ್ ನಲ್ಲಿ ನಡೆಯುತ್ತಿರೋ ನರಮೇಧದಿಂದ ಹೈರಾಣಾಗಿರೋ ಅಫ್ಘಾನಿಸ್ತಾನದವರು ಭಾರತಕ್ಕೆ ಬರಲು ಇಚ್ಛಿಸುವವರಿಗೆ ಭಾರತದಿಂದ ತಾತ್ಕಾಲಿಕ ವೀಸಾದ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತಿದೆ. ಕರ್ನಾಟದಲ್ಲಿರೋ ಅಪ್ಘಾನ್ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಿದೆ.ಈ ಹೆಲ್ಪ್ ಡೆಸ್ಕ್ ಗೆ ನಿರಂತರವಾಗಿ ವಿದ್ಯಾರ್ಥಿಗಳು ಕರೆ ಮಾಡಿ ನಮ್ಮ ಪೋಷಕರನ್ನ ಭಾರತ ಹಾಗೂ ಬೆಂಗಳೂರಿಗೆ ಕರಿಸಿಕೊಡುವಂತೆ ಮನವಿ ಮಾಡುತ್ತಿದ್ದರು. ಆ ಕಾರಣಕ್ಕಾಗಿ ತಾತ್ಕಾಲಿಕ ವೀಸಾ ಆನ್‍ಲೈನ್ ನಲ್ಲಿ ವೆಬ್‍ಸೈಟ್ ಮೂಲಕ ಅಪ್ಲೈ ಮಾಡಿ ತಾತ್ಕಾಲಿಕ ವೀಸಾ ಪಡೆದುಕೊಳ್ಳಲುವಂತೆ ಸಲಹೆ ಸೂಚನೆಯನ್ನ ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಬೇಡಿಕೆ ಈಡೇರಿಸುವಂತೆ ಸಿಎಂ ಕಾಲಿಗೆ ಬಿದ್ದ ರೈತಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ವೀಸಾದಡಿ ಬಂದಿರೋ ಅಪ್ಘಾನ್ ವಿದ್ಯಾರ್ಥಿಗಳ ವೀಸಾದ ಅವಧಿ ಮುಗಿದಿರೋದರಿಂದ ಅವರು ಕೂಡ ವೀಸಾದ ಅವಧಿಯನ್ನ ವಿಸ್ತರಿಸಲು ಮನವಿ ಮಾಡಿದ್ದರಿಂದ ವೆಬ್‍ಸೈಟ್ ನಲ್ಲಿ ಅಪ್ಲೈ ಮಾಡಿ ತಾತ್ಕಾಲಿಕ ವೀಸಾ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.Sign in to your account
Username or Email Address


Password

 Remember Me


