ಕಾರವಾರ: ಕಲ್ಲು ಬಂಡೆಯ ಮುಂದೆ ಸೆಲ್ಫಿ ತೆಗಿಯಲು ಹೋದ ಯುವಕ ಕಾಲುಜಾರಿ ಬಿದ್ದು ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‍ನಲ್ಲಿ (Om Beach) ಇಂದು ಮಧ್ಯಾಹ್ನ ನಡೆದಿದೆ.ಹಾನಗಲ್ ಮೂಲದ ಶೇಕಪ್ಪ ಕಮಾಟಿ (35) ಸಮುದ್ರಪಾಲಾದ ವ್ಯಕ್ತಿಯಾಗಿದ್ದಾನೆ. ಇಂದು ಮಧ್ಯಾನ ಹಾನಗಲ್ ನಿಂದ ಗೋಕರ್ಣಕ್ಕೆ 12 ಜನರೊಂದಿಗೆ ಆಗಮಿಸಿದ್ದ ಈತ ಓಂ ಬೀಚ್‍ನ ಬಲಭಾಗದಲ್ಲಿರುವ ಸಮುದ್ರ ತೀರದ ಕಲ್ಲುಬಂಡೆ ಬಳಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದನು. ಈ ವೇಳೆ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾನೆ. ಇದನ್ನೂ ಓದಿ: ಮದುವೆಗಾಗಿ ದೇವಸ್ಥಾನಕ್ಕೆ ಬಂದಿರುವ ಕುಟುಂಬಗಳ ನಡುವೆ ಗಲಾಟೆ- ವೀಡಿಯೋ ವೈರಲ್ಲೈಫ್ ಗಾರ್ಡಗಳು ರಕ್ಷಿಸುವ ಪ್ರಯತ್ನ ಮಾಡಿದರಾದರೂ ರಕ್ಷಣೆ ಸಾಧ್ಯವಾಗಿಲ್ಲ. ಈತನ ಶವಕ್ಕಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತಿದ್ದು , ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


