ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಇಂದು ಒಂದೂವರೆ ಸಾವಿರದ ಸನಿಹಕ್ಕೆ ಕೇಸ್ ಗಳು ದಾಖಲಾಗಿವೆ. ಇಂದು ಕೂಡ ರಾಜ್ಯದಲ್ಲಿ 1,350 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.ಪಾಸಿಟಿವಿಟಿ ರೇಟ್ ಶೇ.0.85ಕ್ಕೆ ಇಳಿಕೆಯಾಗಿದೆ. 100 ಜನರಿಗೆ ಟೆಸ್ಟ್ ಮಾಡಿದರೆ ಒಬ್ಬರಿಗೆ ಪಾಸಿಟಿವ್ ಬರುತ್ತದೆ. ಬೆಂಗಳೂರಿನಲ್ಲಿ ಕೂಡ ಇಂದು 260 ಕೇಸ್ ದಾಖಲಾಗಿದ್ದು, ಓರ್ವ ಮೃತಪಟ್ಟಿದ್ದಾರೆ. ಜೊತೆಗೆ ರಾಜ್ಯದಲ್ಲಿ ಇಂದು 1,648 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 374 ಜನ ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್ಇಂದು ರಾಜ್ಯದಲ್ಲಿ ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 3,7127ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು ಒಂದು ಲಕ್ಷಕ್ಕೂ ಹೆಚ್ಚು ಕೊವಿಡ್ ಟೆಸ್ಟ್ ಆಗಿದೆ. 157509 ಕೊವಿಡ್ ಟೆಸ್ಟ್ ಆಗಿದ್ದು, 1,350 ಪಾಸಿಟಿವ್ ಆಗಿರೋದು ಕೊರೋನಾ ಕಂಟ್ರೋಲ್ ನಲ್ಲಿ ಇರೋದು ಗೊತ್ತಾಗ್ತಿದೆ. ಇದನ್ನೂ ಓದಿ: ಓಣಂ ಸಂಭ್ರಮ- ಉಯ್ಯಾಲೆ ಆಡಿದ ಶಶಿ ತರೂರ್ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 43, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 260, ಬೀದರ್ 1, ಚಾಮರಾಜನಗರ 6, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 17, ಚಿತ್ರದುರ್ಗ 16, ದಕ್ಷಿಣ ಕನ್ನಡ 320, ದಾವಣಗೆರೆ 15, ಧಾರವಾಡ 5, ಗದಗ 2, ಹಾಸನ 101, ಹಾವೇರಿ 0, ಕಲಬುರಗಿ 2, ಕೊಡಗು 63, ಕೋಲಾರ 17, ಕೊಪ್ಪಳ 0, ಮಂಡ್ಯ 26, ಮೈಸೂರು 102, ರಾಯಚೂರು 0, ರಾಮನಗರ 3, ಶಿವಮೊಗ್ಗ 50, ತುಮಕೂರು 68, ಉಡುಪಿ 177, ಉತ್ತರ ಕನ್ನಡ 40, ವಿಜಯಪುರ 6 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.ಇಂದಿನ 21/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/BPxH75fXLB @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/ReEcB1Lxr6— K'taka Health Dept (@DHFWKA) August 21, 2021Sign in to your account
Username or Email Address


Password

 Remember Me


