ಬೆಂಗಳೂರು: ಪಿಕ್ಚರ್ ಅಭೀ ಬಾಕಿ ಹೈ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಆದರೆ ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ ಎಂದು ನಾವು ಕಾಲೆಳೆದಿದ್ದೇವೆ ಎಂದು ಶಾಸಕ ರಾಜೂ ಗೌಡ ಹೇಳಿದ್ದಾರೆ.ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಖಾತೆ ವಿಚಾರದಲ್ಲಿನ ಮುನಿಸು ಇನ್ನೂ ತಣ್ಣಗಾಗಿಲ್ಲ. ಈ ಕುರಿತು ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಣ್ಣ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿದ್ದೀಯಾ, ಥಿಯೇಟರ್ ಸಬ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ ಎಂದು ನಾವು ಆನಂದ್ ಸಿಂಗ್ ಅವರ ಕಾಲೆಳೆದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಇಡಿ ಬುಲಾವ್ -ದೆಹಲಿಗೆ ತೆರಳಿದ ಜಮೀರ್ ಅಹ್ಮದ್ ಖಾನ್!ಪಿಕ್ಚರ್ ಅಭೀ ಬಾಕಿ ಹೈ ಎಂದಿದ್ದೀಯಲ್ಲಣ್ಣ, ಕೊರೊನಾ ಇರುವುದರಿಂದ ಥೀಯೇಟರ್ ಬಂದ್ ಇದ್ದಾವೆ. ನೀನು ಎಲ್ಲಿ ಪಿಕ್ಚರ್ ಆರಂಭಿಸುತ್ತಿಯಣ್ಣ ಎಂದು ಹೀಗೆ ಮಾತನಾಡುತ್ತಿರುವಾಗ ಹಾಸ್ಯ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದರು.ಸಚಿವ ಆನಂದ್ ಸಿಂಗ್ ಅವರಿಗೆ ಖಾತೆ ವಿಚಾರದಲ್ಲಿ ಅಸಮಾಧಾನ ಇರುವುದು ನಿಜ. ಆದರೆ ನಾವೆಲ್ಲ ಸ್ನೇಹಿತರು ಅವರಿಗೆ ಮಾತಾಡಿದ್ದೇವೆ. ಈಗ ಸಮಾಧಾನ ಆಗಿದ್ದಾರೆ. ಅವರ ಕ್ಷೇತ್ರದಲ್ಲಿ ಧ್ವಜಾರೋಹಣ ಕೂಡ ಮಾಡಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸಿದಾಗ ಸಹ ಭೇಟಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಸಹ ಬರುತ್ತಾರೆ. ನಾವೂ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸಿದ್ದೇವೆ. ಖಾತೆ ಹಂಚಿಕೆಯಲ್ಲಿ ಅವರಿಗೆ ಅಸಮಧಾನ ಇರೋದು ಸತ್ಯ. ಆದರೆ ಹೈಕಮಾಂಡ್ ಬದಲಾಗಿ, ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.Sign in to your account
Username or Email Address


Password

 Remember Me


