ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ಅವಘಡ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೋರ್ವನಿಗೆ ಗಾಯಗಳಾಗಿವೆ.ಹಸನ್ ಸಾಬ್ ಮುಲ್ಲಾ (55) ಹುಲಿಗೆಮ್ಮ (25) ಮೃತದುರ್ದೈವಿಗಳು. ದೇವರನ್ನು ಹಿಡಿದ ವ್ಯಕ್ತಿ ಮತ್ತು ದರ್ಶನಕ್ಕೆ ಹೋಗಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂದು ಬೆಳಗಿನ ಜಾವ 5.30ರ ಸುಮಾರಿಗೆ ಘಟನೆ ನಡೆದಿದೆ. ಮೊಹರಂ ಕತ್ತಲರಾತ್ರಿ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ ದೇವರುಗಳು ಭೇಟಿ ನೀಡುವ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್ಹುಸೇನ್ ಪಾಶಾ ದೇವರನ್ನ ದಾದನ್ ದೊಡ್ಡಿ ದರ್ಗಾಕ್ಕೆ ಕರೆದೊಯ್ಯುವ ವೇಳೆ ದೇವರು ವಿದ್ಯುತ್ ತಂತಿಗೆ ತಾಗಿ ದುರ್ಘಟನೆಯಾಗಿದೆ. ಕೋವಿಡ್ ಹಿನ್ನೆಲೆ ನಿಷೇಧದ ನಡುವೆಯೂ ಮೊಹರಂ ಆಚರಣೆಗೆ ಗ್ರಾಮಸ್ಥರು ಮುಂದಾಗಿದ್ದರು. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Sign in to your account
Username or Email Address


Password

 Remember Me


