ಹಾವೇರಿ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗಮನದ ವೇಳೆ ಕಳ್ಳರು ಮೂವರು ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಿದ್ದು, ಒಟ್ಟು 20 ಸಾವಿರ ರೂ.ಕಳ್ಳತನ ಮಾಡಿರುವ ಘಟನೆ ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ನಡೆದಿದೆ.ಮೂವರು ಕಾರ್ಯಕರ್ತರ ಜೇಬು ಕತ್ತರಿಸಿದ್ದು, ಪುಷ್ಪಾರ್ಪಣೆ ಮಾಡುವ ವೇಳೆಯಲ್ಲಿ ಜೇಬಿನಲ್ಲಿದ್ದ 20 ಸಾವಿರಕ್ಕೂ ಅಧಿಕ ಹಣವನ್ನ ಖದೀಮರು ಎಗರಿಸಿದ್ದಾರೆ. ಖದೀಮರ ಕೈಚಳಕಕ್ಕೆ ಹಣ ಕಳೆದುಕೊಂಡ ಮೂವರು ಕಂಗಾಲಾಗಿದ್ದಾರೆ.ಸಚಿವ ನಾರಾಯಣಸ್ವಾಮಿ ಆಗಮನದ ಹಿನ್ನೆಲೆ ಹೆಚ್ಚು ಜನ ಜಮಾಯಿಸಿದ್ದ ವೇಳೆ ಮೂವರು ಬಿಜೆಪಿ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಲಾಗಿದೆ. ಸಚಿವರ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ಕಳ್ಳರು ಕೈಚಳಕ ತೋರಿಸಿದ್ದು, ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿತ್ತು. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. Watch PUBLiC TV LIVESign in to your account
Username or Email Address


Password

 Remember Me


