ಬೆಂಗಳೂರು: ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ, ಅದು ಕನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  (Siddaramaiah) ಹೇಳಿದ್ದಾರೆ.ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ನಡೆದ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಬಿಜೆಪಿಗರು ಪದೇ ಪದೇ ವಿಕಸಿತ ಭಾರತ ಎಂದು ಹೇಳುತ್ತಾರೆ. ವಿಕಸಿತ ಭಾರತ ಅವರ ನೈಜ ವಿಚಾರ ಅಲ್ಲ. ವಿಕಸಿತ ಭಾರತ ಆಗೋದು ಅವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವ ಹಿಡನ್ ಅಜೆಂಡಾ, ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಆಗಲ್ಲ, ಈ ದೇಶ ಬಹುತ್ವ ರಾಷ್ಟ್ರ, ಎಲ್ಲಾ ವರ್ಗದ ಜನ ಇಲ್ಲಿದ್ದಾರೆ. ಸಂವಿಧಾನದ ಅನುಸಾರ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಅವರು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಜವಾಹರಲಾಲ್ ನೆಹರು 60ನೇ ಪುಣ್ಯತಿಥಿ- ಪ್ರಧಾನಿ ಮೋದಿ ಗೌರವ ನಮನಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಸೋಲ್ತೀವಿ ಎಂದು ಗೊತ್ತಾಗಿದೆ. ಅದಕ್ಕಾಗಿ ಬಾಯಿಗೆ ಬಂದಂತೆ ಅವರು ಮಾತಾಡ್ತಿದ್ದಾರೆ. ಮತಕ್ಕಾಗಿ ಹಿಂದೂ ಮುಸ್ಲಿಂ ವಿಭಜನೆ ಮಾಡಿ ಮಾತಾಡ್ತಾರೆ. ಹತಾಶೆಯಿಂದ ಹೀಗೆ ಮಾತಾಡುತ್ತಿದ್ದಾರೆ. ನರೇಂದ್ರ ಮೋದಿ ನನ್ನನ್ನು 2047ರ ತನಕ ಸೇವೆ ಮಾಡಲು ದೇವರು ಕಳಿಸಿದ್ದಾನೆ ಎನ್ನುತ್ತಾರೆ. ನರೇಂದ್ರ ಮೋದಿ ಏನು ದೇವರ ಅವತಾರನಾ? ಎಂದು ಅವರು ವ್ಯಂಗ್ಯವಾಡಿದ್ದಾರೆ.ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ (H.D Kumaraswamy) ಆರೋಪಗಳ ವಿಚಾರಕ್ಕೆ, ಕುಮಾರಸ್ವಾಮಿ ನಿನ್ನೆ ಸಹ ಮಾತನಾಡಿದ್ದಾರೆ. ಅಭಿವೃದ್ಧಿ ಶೂನ್ಯ ಅಂತ ಹೇಳಿದ್ದಾರೆ. ಜನರಿಗೆ ಸಾಮಾಜಿಕ ಆರ್ಥಿಕ ಶಕ್ತಿ ನೀಡುವುದು ಕೂಡ ಅಭಿವೃದ್ಧಿ. ಇಡೀ ದೇಶದಲ್ಲಿ ಮೋದಿ ಮಾಡಿದ್ದಾರಾ? ಬರೀ ರಸ್ತೆ ಮಾಡುವುದು ಸೇತುವೆ ಮಾಡುವುದು ನೀರಾವರಿ ಮಾಡುವುದು ಮಾತ್ರ ಅಭಿವೃದ್ಧಿ ಅಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದೊಡ್ಡ ಅನ್ಯಾಯ ಮಾಡಿದೆ. ರಾಜ್ಯದ ಪಾಲಿನ ಹಣವನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ದೇಶವನ್ನು ಒಡೆಯುತ್ತಿರುವುದು ಇವರು, ನಾವು ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟುಕೊಂಡವರು. ಬಿಜೆಪಿಯವರು ( BJP) ಮೊದಲು 28 ಕ್ಕೆ 28 ಗೆಲ್ತೀವಿ ಅಂತಿದ್ರು. ಈಗ ನಿಧಾನಕ್ಕೆ ಕಾಂಗ್ರೆಸ್ 10-12 ಗೆಲ್ಲಬಹುದು ಎಂದು ಅವರೇ ಹೇಳಲು ಪ್ರಾರಂಭ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಧರ್ಮಸ್ಥಳದ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್.ಡಿ ರೇವಣ್ಣSign in to your account
Username or Email Address


Password

 Remember Me


