ಬೆಂಗಳೂರು: ಇಂದು 1,298 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 32 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 21,481 ಸಕ್ರಿಯ ಪ್ರಕರಣಗಳಿವೆ.ಇಂದು 1,833 ಜನರು ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.1.01 ಮತ್ತು ಮರಣ ಪ್ರಮಾಣ ಶೇ.2.46 ರಷ್ಟಿದೆ. ಇಂದು ರಾಜ್ಯದಲ್ಲಿ ಒಟ್ಟು 1,28,269 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದುವರೆಗೂ ರಾಜ್ಯದಲ್ಲಿ 29,31.827 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 37,039 ಮಂದಿ ಸಾವನ್ನಪ್ಪಿದ್ದಾರೆ.ರಾಜಧಾನಿ ಬೆಂಗಳೂರಿನಲ್ಲಿಂದ 240 ಜನರ ದೇಹವನ್ನು ಮಹಾಮಾರಿ ಹೊಕ್ಕಿದ್ದು, 10 ಮಂದಿ ಸಾವನ್ನಪಿದ್ದಾರೆ. ಇಂದು ಬೆಂಗಳೂರಿನಲ್ಲಿ 471 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ರೆ, ಸದ್ಯ 7,913 ಸಕ್ರಿಯ ಪ್ರಕರಣಗಳಿವೆ. ಬಾಗಲಕೋಟೆ, ಬೀದರ್ ಮತ್ತು ರಾಯಚೂರಿನಲ್ಲಿ ಕೊರೊನಾ ಸೊನ್ನೆ ಸುತ್ತಿದೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 5, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 30, ಬೆಂಗಳೂರು ನಗರ 340, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 59, ಚಿತ್ರದುರ್ಗ 7, ದಕ್ಷಿಣ ಕನ್ನಡ 288, ದಾವಣಗೆರೆ 14, ಧಾರವಾಡ 5, ಗದಗ 1, ಹಾಸನ 66, ಹಾವೇರಿ 1, ಕಲಬುರಗಿ 4, ಕೊಡಗು 37, ಕೋಲಾರ 17, ಕೊಪ್ಪಳ 1, ಮಂಡ್ಯ 18, ಮೈಸೂರು 88, ರಾಯಚೂರು 0, ರಾಮನಗರ 3, ಶಿವಮೊಗ್ಗ 51, ತುಮಕೂರು 52, ಉಡುಪಿ 122, ಉತ್ತರ ಕನ್ನಡ 48, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.Sign in to your account
Username or Email Address


Password

 Remember Me


