ದಾವಣಗೆರೆ: ಕೊರೊನಾ ಕಾಲದಲ್ಲಿ ಜನರಿಗೆ ಹೋಳಿಗೆ ಊಟ ಹಾಕಿಸಿ, ಜನಪರವಾಗಿ ಕೆಲಸಮಾಡಿದ್ದೀರಿ, ನನ್ನ ಬಳಿ ವೀಡಿಯೋ ಇದೆ. ನಿಮ್ಮ ಜನಸೇವೆ ಮರೆಯುವುದಿಲ್ಲ ಎಂದು ವೀಡಿಯೋ ತೋರಿಸಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಬಾಲಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.ರೇಣುಕಾಚಾರ್ಯ ಅವರು ಹೊನ್ನಾಳಿ ಕ್ಷೇತ್ರ ಪ್ರವಾಸದಲ್ಲಿದ್ದರು. ಈ ವೇಳೆ ಶಾಸಕರ ಕಾರ್ಯಕ್ಕೆ ಹೊನ್ನಾಳಿ ತಾಲೂಕಿನ ತುಂಬಿಗೆರೆ ಗ್ರಾಮದ ವಿದ್ಯಾರ್ಥಿನಿ ಮೈತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಸರ್ ನಿಮ್ಮೊಂದಿಗೆ ಒಂದು ಫೋಟೋ ಬೇಕೆಂದು ಕೇಳಿ ಸೆಲ್ಫಿ ತೆಗೆದುಕೊಂಡಳು. ಇದನ್ನೂ ಓದಿ: ಅಂಬುಲೆನ್ಸ್‌ಗೂ ದಾರಿ ಬಿಡದ ಕಾಂಗ್ರೆಸ್ ಕಾರ್ಯಕರ್ತರುಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕ ರೇಣುಕಾಚಾರ್ಯ ಮಾಡಿದ ಕಾರ್ಯಕ್ಕೆ ಮನಸೋತ ಬಾಲಕಿ, ಅವರ ಸೇವೆಯನ್ನು ಜನರ ಮುಂದೆ ಹಾಡಿ ಹೊಗಳಿದಳು. ಬಳಿಕ ಶಾಸಕ ರೇಣುಕಾಚಾರ್ಯ ಪುಟ್ಟ ಬಾಲಕಿಯ ಮಾತುಗಳನ್ನು ಆಲಿಸಿ, ಮನಸೋತು, ಪುಸ್ತಕ ನೀಡಿ ಚೆನ್ನಾಗಿ ಓದುವಂತೆ ತಿಳಿಸಿದರು.Sign in to your account
Username or Email Address


Password

 Remember Me


